ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿ ಪೋಲಿಸರಿಂದ ಮತ್ತೋರ್ವ ಆರೋಪಿ ಬಂಧನ

ಹೊಸದಿಗಂತ ವರದಿ ಕಲಬುರಗಿ: 

ಪಿಎಸ್ಐ ಪರೀಕ್ಷೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದುವರೆಗೂ ಬಂಧಿತ ಆರೋಪಿಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಎಂಬಾತ 34ನೇ ಆರೋಪಿಯಾಗಿದ್ದಾನೆ.

ಕಲಬುರಗಿಯಲ್ಲಿರುವ ಆರ್‌.ಡಿ.ಪಾಟೀಲ್ ಮನೆ ಸಮೀಪದಲ್ಲೇ ಸಣ್ಣದೊಂದು ಬಾಡಿಗೆ ಮನೆ ಮಾಡಿಕೊಂಡು ಪ್ರಕಾಶ್ ವಾಸವಿದ್ದ. ಪ್ರಕಾಶ್ ಮೂಲತಃ ಅಫ್ಜಲ್‌ಪುರ ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ನಿವಾಸಿಯಾಗಿದ್ದಾನೆ. ನಗರದ ಎಂ.ಎಸ್.ಐ. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪಾಸಾಗಿದ್ದ ಪ್ರಭು ಎಂಬ ಅಭ್ಯರ್ಥಿ ಗೆ ಪ್ರಕಾಶ್ ಬ್ಲೂಟೂತ್ ಡಿವೈಸ್ ನೀಡಿ ಬಂದಿದ್ದನು. ಆರ್.ಡಿ.ಪಾಟೀಲ್ ಆಪ್ತ, ಪ್ರಕಾಶ್ ಕೂಡಾ ಇದೀಗ ಸಿಐಡಿ ಗಾಳಕ್ಕೆ ಬಿದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!