Thursday, July 7, 2022

Latest Posts

ಪಿಎಸ್ಐ ನೇಮಕಾತಿ ಅಕ್ರಮ: ಆರ್‌ಡಿ‌ಪಿ, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನಿರಾಕರಣೆ

ಹೊಸ ದಿಗಂತ ವರದಿ, ಕಲಬುರಗಿ:

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ನ್ಯಾಯಾಲಯ ಜಾಮೀನು ನೀಡಲು‌ ಮತ್ತೆ ನಿರಾಕರಿಸಿದೆ. ಇದರೊಂದಿಗೆ ನಾಲ್ವರಿಗೂ ಜೈಲೆ ಗತಿಯಾಗಿದೆ.
ಕಲಬುರಗಿ ಜಿಲ್ಲಾ 3 ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ನ್ಯಾಯಾಲಯ ತೀರಸ್ಕರಿಸಿದೆ.. ಬ್ಲೂಟೂತ್ ಡಿವೈಸ್ ಮೂಲಕ ಅಕ್ರಮದ ಮೂಲಕ ಅಭ್ಯರ್ಥಿಗಳು ತೇರ್ಗಡೆ ಆಗಲು ಸಹಕರಿಸುತ್ತಿದ್ದ ಆರೋಪಿ ಆರ್.ಡಿ.ಪಾಟೀಲ್, ಎನ್.ವಿ. ಸುನೀಲ್, ತಮ್ಮ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಅಕ್ರಮ ನಡೆಸಲು ಸಹಕರಿಸಿದ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಇದೆ ಶಾಲೆಯ ಹೆಡ್ಮಾಸ್ಟರ್ ಕಾಶಿನಾಥ ನಾಲ್ವರ ಜಾಮೀನು ನ್ಯಾಯಾಧೀಶ ಬಸವರಾಜ ನೇಸರಗಿ ಅವರ ನೇತೃತ್ವದ ಪೀಠ ತೀರಸ್ಕರಿಸಿದೆ.
ಈ ಹಿಂದೆಯೂ ಆರೋಪಿಗಳು ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನ ಕೈಗೆತ್ತಿಕೊಂಡಿದ್ದ ನ್ಯಾಯಲಯ ಜಾಮೀನು ನೀಡಲು ನಿರಾಕರಿಸಿತ್ತು. ಆರೋಪಿಗಳಿಗೆ ಜಾಮೀನು ನೀಡದಂತೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss