ಭಾರತೀಯ ಒಲಂಪಿಕ್​ ಸಂಸ್ಥೆಯ ಅಧ್ಯಕ್ಷರಾಗಿ ಪಿಟಿ ಉಷಾ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಾಜಿ ಓಟಗಾರ್ತಿ, ಏಷ್ಯನ್​ ಗೇಮ್ಸ್​ ಚಿನ್ನದ ಪದಕ ವಿಜೇತೆ ಪಿಟಿ ಉಷಾ ಅವರು ಭಾರತೀಯ ಒಲಂಪಿಕ್​ ಸಂಸ್ಥೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಉಷಾ ಅವರನ್ನು ಹೊರತುಪಡಿಸಿ ಯಾರೊಬ್ಬರೂ ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆದಿದೆ.

ಈ ಮೂಲಕ ಒಲಂಪಿಕ್​​ ಸಂಸ್ಥೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಿಟಿ ಉಷಾ ಅವರು ಪಾತ್ರರಾದರು.
ಇನ್ನುಳಿದಂತೆ ಉಪಾಧ್ಯಕ್ಷ(ಮಹಿಳೆ), ಜಂಟಿ ಕಾರ್ಯದರ್ಶಿ(ಮಹಿಳೆ) ನಾಲ್ಕು ಕಾರ್ಯಕಾರಿ ಮಂಡಳಿ ಸದಸ್ಯ ಸ್ಥಾನಕ್ಕೆ 12 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಡಿಸೆಂಬರ್​ 10 ರಂದು ಚುನಾವಣೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!