September 13, 2026
Sunday, September 13, 2026
spot_img

ಚಂದ್ರಗ್ರಹಣ ಹಿನ್ನೆಲೆ ಬೆಂಗಳೂರಿನ ದೇವಾಲಯಗಳಲ್ಲಿ ಪೂಜಾ ಸಮಯ ಬದಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 3ರಂದು ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರದಲ್ಲಿನ ಪ್ರಮುಖ ದೇವಾಲಯಗಳಲ್ಲಿ ಪೂಜಾ ಮತ್ತು ದರ್ಶನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಹಣಕ್ಕೂ ಆರು ಗಂಟೆ ಮೊದಲು ಸೂತಕ ಆರಂಭವಾಗುವುದರಿಂದ ಭಕ್ತರಿಗೆ ಸೂಚನೆಗಳನ್ನು ನೀಡಲಾಗಿದೆ.

ಬನಶಂಕರಿ ಅಮ್ಮನ ದೇವಾಲಯದಲ್ಲಿ ಗ್ರಹಣದ ಸಮಯದಲ್ಲಿ ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಗ್ರಹಣ ಮುಗಿದ ನಂತರ ಸಂಜೆ 7 ಗಂಟೆಯ ಬಳಿಕ ನಿತ್ಯ ಪೂಜೆ ಪುನರಾರಂಭವಾಗಲಿದೆ.

ಗವಿಗಂಗಾಧರೇಶ್ವರ ದೇವಾಲಯವು ಬೆಳಗ್ಗೆ 9 ಗಂಟೆಗೆ ಮುಚ್ಚಲಾಗುತ್ತಿದ್ದು, ಸಂಜೆ 7.45 ನಂತರ ಭಕ್ತರಿಗೆ ದರ್ಶನ ಅವಕಾಶ ದೊರೆಯಲಿದೆ. ಮರುದಿನ ಲೋಕಕಲ್ಯಾಣಕ್ಕಾಗಿ ಗ್ರಹಣ ಶಾಂತಿ ಹೋಮ ನಡೆಸಲು ಸಿದ್ಧತೆ ಮಾಡಲಾಗಿದೆ.

ಇದನ್ನೂ ಓದಿ:

ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಬಾಗಿಲು ಮುಚ್ಚಿ, ರಾತ್ರಿ 7.30ಕ್ಕೆ ಪುನಃ ತೆರೆಯಲಾಗುತ್ತದೆ. ಮರುದಿನ ನವಗ್ರಹ ಶಾಂತಿ ಹೋಮ ನಡೆಯಲಿದ್ದು, ದಾನಧರ್ಮ ಮಾಡುವಂತೆ ಭಕ್ತರಿಗೆ ಮನವಿ ಮಾಡಲಾಗಿದೆ.

ದೊಡ್ಡ ಗಣಪತಿ ದೇವಾಲಯದಲ್ಲಿ ಸಂಜೆ 7.45ರಿಂದ ದರ್ಶನ ಆರಂಭವಾಗಲಿದೆ. ಬಂಡೆ ಮಹಾಕಾಳಿ ದೇವಾಲಯದಲ್ಲಿ ಗ್ರಹಣ ಸಮಯದಲ್ಲೇ ವಿಶೇಷ ಹೋಮ ನಡೆಯಲಿದ್ದು, ದೇವಿ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !