ಯಮನನ್ನು ಮೆಚ್ಚಿಸಲು ಶ್ವಾನಗಳಿಗೆ ಪೂಜೆ, ನೇಪಾಳದಲ್ಲಿ ವಿಶೇಷ ಕುಕುರ್ ತಿಹಾರ್ ಹಬ್ಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಲ್ಲಿ ಪ್ರತಿವರ್ಷ ಯಮದೇವನನ್ನು ಮೆಚ್ಚಿಸಲು ನಾಯಿಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಕುಕುರ್ ತಿಹಾರ್ ಹಬ್ಬದಲ್ಲಿ ನಾಯಿಗಳಿಗೆ ತಿಲಕವಿಟ್ಟು, ಹೂವಿನ ಹಾರ ಹಾಕಲಾಗುತ್ತದೆ. ಅವುಗಳಿಗೆ ಪ್ರಿಯವಾದ ಮಾಂಸ,ಹಾಲು ಹಾಗೂ ಮೊಟ್ಟೆ ನೀಡಲಾಗುತ್ತದೆ.

ಕಠ್ಮಂಡುವಿನ ಕೆನಲ್ ವಿಭಾಗದಲ್ಲಿ ಕುಕುರ್ ತಿಹಾರ್ ಆಚರಿಸಿದ್ದು, ಶ್ವಾನ ಉತ್ಸವ ನೆರವೆರಿದೆ. ಇದರಲ್ಲಿ ನೇಪಾಳದ ಪೊಲೀಸರೊಬ್ಬರು ಶ್ವಾನಕ್ಕೆ ಆಹಾರ ನೀಡಿದ್ದಾರೆ.

ಈ ಹಬ್ಬದಲ್ಲಿ ಶ್ವಾನಗಳಿಗೆ ಮನರಂಜನೆ ಕಾರ್ಯಕ್ರಮ ಕೂಡ ಇಡಲಾಗುತ್ತದೆ. ಅವುಗಳಿಗೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶ್ವಾನಗಳು ಯಮದೇವರ ಸಂದೇಶವಾಹಕರು ಎಂದು ನಂಬಲಾಗಿದೆ. ಹಾಗಾಗಿ ನಾಯಿಗಳಿಗೆ ಪೂಜೆ ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!