Sunday, June 4, 2023

Latest Posts

ಪಂಪ್‌ ರಿಪೇರಿ: ಬಾವಿಗಿಳಿದ ಮೂವರ ದುರ್ಮರಣ

ಹೊಸ ದಿಗಂತ ವರದಿ, ಯಲ್ಲಾಪುರ :

ಪಂಪ್‌ ರಿಪೇರಿಗೆಂದು ಬಾವಿಗೆ ಇಳಿದು ಆಯ ತಪ್ಪಿ ನೀರಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಇಳಿದ ಇನ್ನೀರ್ವರೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಮಾವಿನಕಟ್ಟಾದಲ್ಲಿ ಗುರುವಾರ ನಡೆದಿದೆ.

ಶಿರಸಿಯ ದೇವನಿಲಯದ ನಿವಾಸಿ ಗೋವಿಂದ ಸೋಮಯ್ಯ ಪೂಜಾರಿ (60) ಎನ್ನುವವರು ಯಲ್ಲಾಪುರ ತಾಲೂಕಿನ ಮಾವಿಕಟ್ಟಾದ ಮನೆಯ ಪಂಪ್‌ ಸರಿಪಡಿಸುವಾಗ ಬಾವಿಯೊಳಗೆ ಬಿದ್ದಿರುತ್ತಾರೆ. ಇವರನ್ನು ರಕ್ಷಿಸಲೆಂದು ಅಲ್ಲೇ ಇದ್ದ ಮಾವಿನಕಟ್ಟಾದ ಗಣೇಶ ರಾಮದಾಸ್‌ ಶೇಟ್‌ (23) ಹಾಗೂ ಭರತನಹಳ್ಳಿಯ ಸುರೇಶ ನಾಯರ್‌ (40) ಬಾವಿಯೊಳಗೆ ಇಳಿದಿದ್ದು, ಮೂವರೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುತ್ತಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿರುತ್ತಾರೆ. ಈ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!