ಹೊಸದಿಗಂತ ಬೆಳಗಾವಿ:
ಇಲ್ಲಿನ ಶಾಹುನಗರದಲ್ಲಿ ಕೆಲ ಕಿಡಿಗೇಡಿಗಳು ರವಿವಾರ ರಾತ್ರಿ ಔರಂಗಜೇಬ್ ನ ಬ್ಯಾನರ್ ಅಳವಡಿಕೆ ಮಾಡುವ ಮೂಲಕ ಪುಂಡಾಟ ಮೆರೆದ ಘಟನೆ ನಡೆದಿದೆ.
ರಾತ್ರೋರಾತ್ರಿ ಬ್ಯಾನರ್ ಅಳವಡಿಕೆ ಮಾಡಿದ ಕಿಡಿಗೇಡಿಗಳ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಕೂಡಲೇ ಬ್ಯಾನರ್ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೇ ಈ ಕುರಿತು ಸಾರ್ವಜನಿಕರು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಪೊಲೀಸರ ಮೂಲಕ ಬ್ಯಾನರ್ ತೆರವುಗೊಳಿಸಿ ಸಂಭವನೀಯ ಅವಘಡವನ್ನು ಪೊಲೀಸರು ತಪ್ಪಿಸಿದ್ದಾರೆ.
ಇತ್ತ ಪೊಲೀಸರು ಬ್ಯಾನರ್ ತೆರವುಗೊಳಿಸಿದರೆ ಅತ್ತ ಕೆಲ ಕಿಡಿಗೇಡಿಗಳು ಮತ್ತೆ ವಿಡಿಯೋ ಮಾಡಿ ಹಿಂದೂ ರಾಷ್ಟ್ರ ಎಂದು ಬರೆದಿರುವ ಹಾಗೂ ಸಾವರ್ಕರ್ ಅವರ ಬ್ಯಾಟರಿಗಳನ್ನು ಏಕೆ ತೆಗೆದಿಲ್ಲ ಎಂದು ಅವಹೇಳನಕಾರಿಯಾಗಿ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಒಟ್ಟಿನಲ್ಲಿ ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.