ರಾಜ್ಯಾದ್ಯಂತ ನಡೆಯಲಿದೆ ಪುನೀತ್ ಫುಡ್ ಫೆಸ್ಟಿವಲ್: ಅಪ್ಪು ಇಷ್ಟಪಡುತ್ತಿದ್ದ ಆಹಾರ ಸವಿಯಲು ಅವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರತ್ನ ಡಾ.ಪುನೀತ್​ ರಾಜ್​ಕುಮಾರ್​ ಅಭಿನಯದ ‘ಗಂಧದ ಗುಡಿ’ ಪ್ರಿರಿಲೀಸ್ ಇವೆಂಟ್​ಗೆ ಅ.21ರಂದು ಅದ್ದೂರಿಯಾಗಿ ನಡೆಯಲಿದ್ದು, ಈ ಒಂದು ಸಂಭ್ರಮಕ್ಕೆ ದಕ್ಷಿಣ ಭಾರತೀಯ ಚಿತ್ರರಂಗವೇ ಸಾಕ್ಷಿಯಾಗಲಿದೆ.
ಇದೇ ವೇಳೆ ಕರ್ನಾಟಕದಾದ್ಯಂತ ‘ಪುನೀತ್ ಫುಡ್ ಫೆಸ್ಟಿವಲ್’ ಕೂಡ ನಡೆಯಲಿದೆ ಅಂತೆ . ಅ.22 ಮತ್ತು 23ರಂದು ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಟೈಟಲ್​​ನಲ್ಲಿ ಫುಡ್​ ಫೆಸ್ಟಿವಲ್ ನಡೆಯಲಿದೆ. ಅಪ್ಪು ಅವರು ಈ ಹಿಂದೆ ಭೇಟಿ ಕೊಟ್ಟಿದ್ದ ಎಲ್ಲ ಹೋಟೆಲ್​ಗಳಲ್ಲೂ ಫುಡ್ ​ಫೆಸ್ಟಿವಲ್ ನಡೆಯುತ್ತಿದ್ದು, ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಜನರಿಗೆ ಅವಕಾಶವಿದೆ.
ವೆಜ್ ಜತೆಗೆ ನಾನ್​ವೆಜ್​ ಊಟದ ವ್ಯವಸ್ಥೆಯೂ ಇರಲಿದೆ. ಅಪ್ಪುಗಾಗಿ ಹೋಟೆಲ್​​​​​ ಮಾಲೀಕರು ಫುಡ್​ ಫೆಸ್ಟಿವಲ್ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.ಕರ್ನಾಟಕದಾದ್ಯಂತ ‘ಫುಡ್ ಫೆಸ್ಟಿವಲ್’ ಮಾಡುವ ಕನಸನ್ನು ಅಪ್ಪು ಕಂಡಿದ್ದರಂತೆ. ಅವರ ಕನಸನ್ನು ಈಗ ನನಸು ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!