ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಟಿಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಷ್ಟೋ ಸಿನಿಮಾಗಳು ಥಿಯೇಟರ್‌ನಲ್ಲಿ ಅಲ್ಲದೇ ಒಟಿಟಿಯಲ್ಲಿ ಮೊದಲು ರಿಲೀಸ್ ಆಗುತ್ತಿವೆ. ಇದೇ ಸಾಲಿಗೆ ದಾನಿಶ್ ಸೇಠ್ ಅಭಿನಯದ ‘ಒನ್ ಕಟ್ ಟು ಕಟ್’ ಸಿನಿಮಾ ಕೂಡ ಸೇರಿದೆ.
ಇಂದು ಒನ್ ಕಟ್ ಟು ಕಟ್ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ. ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಪುನೀತ್ ರಾಜ್‌ಕುಮಾರ್‌ಗೆ ಈ ಸಿನಿಮಾ ತುಂಬಾ ಆಪ್ತವಾಗಿತ್ತು.
ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿದ್ದು, ಗೋಪಿ ಈಗ ನಿಮ್ಮ ಮುಂದೆ ಎಂದು ಟ್ವೀಟ್ ಮಾಡಿದ್ದಾರೆ. ಸಿನಿಮಾದಲ್ಲಿ ದಾನಿಶ್ ಗೋಪಿ ಪಾತ್ರ ಮಾಡಿದ್ದು, ಇದೊಂದು ಕಾಮಿಡಿ ಎಂಟರ್‌ಟೈನರ್ ಆಗಿದೆ. ಜೊತೆಗೆ ಶಾಲೆಗಳನ್ನು ಉಳಿಸಬೇಕು ಎನ್ನುವ ಸಂದೇಶ ಕೂಡ ಇದೆ.
ಗೋಪಿ ಈಗ ನಿಮ್ಮ ಮುಂದೆ.
Here is "An Gopi"#OneCutTwoCutOnPrime, watch now on @PrimeVideoIN.🎥: https://t.co/8Is5EiSFYc@PRK_Productions @PRKAudio @danishsait @VamBho #PrakashBelawadi @samyuktahornad #VineethBeepKumar @RoopaRayappa #Sahitanand @DoCreativeLabs @NakulAbhyankar pic.twitter.com/rlcq5TvovT
— Ashwini Puneeth Rajkumar (@ashwinipuneet) February 2, 2022