ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್‌ಕುಮಾರ್ ಜಗತ್ತನ್ನು ಅಗಲಿ ಇಂದಿಗೆ ಮೂರು ವರ್ಷವಾಗಿದೆ, ಪುನೀತ್ ಜೊತೆಗೆ ಇಲ್ಲದಿದ್ದರೂ ಅವರು ಮಾಡಿದ ಕೆಲಸ, ನೀಡಿದ ಮನರಂಜನೆ ಜನರ ಮನಸ್ಸಿನಲ್ಲಿ ಸದಾ ಜೀವಂತವಾಗಿದೆ.
ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಯನ್ನು ಹೂವಿನಿಂದ ಅಲಂಕರಿಸಲಾಗಿದೆ. ನಟನನ್ನು ಕಾಣಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕುಟುಂಬದವರು ಇಂದು ಸಮಾಧಿಗೆ ಪೂಜೆ ಮಾಡಲಿದ್ದು, ಅಭಿಮಾನಿಗಳು ಕೂಡ ತಮ್ಮ ಕೈಲಾದ ಉತ್ತಮ ಕೆಲಸಗಳನ್ನು ಮಾಡಿ ದಿನವನ್ನು ಸಾರ್ಥಕವಾಗಿಸುವ ಪ್ರಯತ್ನದಲ್ಲಿದ್ದಾರೆ.