ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನ ಧನ್‌ಬಾದ್‌ನ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿನಿಯರ ಶರ್ಟ್ ಅನ್ನು ಬಿಚ್ಚಿಸಿ , ಬ್ಲೇಸರ್‌ನಲ್ಲಿ ಮನೆಗೆ ಕಳುಹಿಸಿದ್ದಾರೆ.
ವಿದ್ಯಾರ್ಥಿನಿಯರು ಅಂಗಿಯ ಮೇಲೆ ಪೆನ್‌ನಿಂದ ಬರೆದುಕೊಂಡಿದ್ದರು, ಇದರಿಂದ ಕೋಪಗೊಂಡ ಪ್ರಾಂಶುಪಾಲ ಶರ್ಟ್ ಬಿಚ್ಚಿಸಿ, ಬರೀ ಬ್ಲೇಸರ್‌ನಲ್ಲೇ ಮನೆಗೆ ಕಳುಹಿಸಿದ್ದಾನೆ. ಪ್ರಾಂಶುಪಾಲರ ಈ ನಡೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಅವರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ, ಪೋಷಕರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಿಶ್ರಾ ಪೋಷಕರಿಗೆ ಭರವಸೆ ನೀಡಿದರು. ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಭರವಸೆ ನೀಡಿದರು. ಈ