ಪಂಜಾಬ್​ ವಿಧಾನಸಭೆ ಚುನಾವಣೆ: ಕಾಂಗ್ರೆಸ್​​​ನಿಂದ ಮೊದಲ ಪಟ್ಟಿ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಬಹುನೀರಿಕ್ಷಿತ ಪಂಜಾಬ್​ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಸರ್ವ ಪಕ್ಷಗಳು ಸಕಲ ಸಿದ್ಧತೆ ನಡೆಸುತ್ತಿದೆ.ಇದೀಗ ಕಾಂಗ್ರೆಸ್​​​ನಿಂದ ಮುಖ್ಯಮಂತ್ರಿ ಚರಣ್​ಜಿತ್​ ಸಿಂಗ್​ ಚನ್ನಿ, ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಸೇರಿದಂತೆ 86 ಅಭ್ಯರ್ಥಿಗಳ ಹೆಸರಿನ ಮೊದಲ ಪಟ್ಟಿ ಬಿಡುಗಡೆ​​ ಆಗಿದೆ.
ಮುಖ್ಯಮಂತ್ರಿ ಚರಣ್​ಜಿತ್​​ ಸಿಂಗ್​ ಚನ್ನಿ ಚಮ್ಕೌರ್​​ ಸಾಹಿಬ್​​ ಎಸ್​​ಸಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ನವಜೋತ್​ ಸಿಂಗ್​ ಸಿಧು ಅಮೃತಸರ್​ದ ಪೂರ್ವ ಕ್ಷೇತ್ರದಿಂದ ಚುನಾವಣೆ ಸ್ಪರ್ದಿಸಲಿದ್ದಾರೆ.
ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಕಣದಲ್ಲಿ ಕಾಂಗ್ರೆಸ್​, ಬಿಜೆಪಿ, ಆಮ್​ ಆದ್ಮಿ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಅವರ ಪಂಜಾಬ್ ಲೋಕ್​ ಕಾಂಗ್ರೆಸ್​ ವು ಪೈಪೋಟಿ ನಡೆಸುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರಿರುವ ನಟ ಸೋನು ಸೂದ್​​ ಅವರ ಸಹೋದರಿ ಮಾಳವಿಕಾ ಸೂದ್​ಗೂ ಟಿಕೆಟ್​ ಖಚಿತಗೊಂಡಿದ್ದು, ಅವರು ಮೋಗಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.
ಇನ್ನು ಪಂಜಾಬ್​ನ ಕಾಂಗ್ರೆಸ್​ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಜೋಗಿಂದರ್​ ಸಿಂಗ್ ಮಾನ್​ ಇಂದು ಕಾಂಗ್ರೆಸ್​ನಿಂದ ಹೊರಬಂದಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಆರಂಭದಲ್ಲೇ ಹಿನ್ನೆಡೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!