ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಕಾರಣದಿಂದ ಸಾಲು ಸಾಲು ಚಿತ್ರಗಳ ರಿಲೀಸ್ ಡೇಟ್ ಅನ್ನು ಮುಂದೂಡಿಕೊಂಡಿವೆ. ಇದೀಗ ನಟ ಚಿರಂಜೀವಿ ನಟನೆಯ ಆಚಾರ್ಯ ಚಿತ್ರದ ಬಿಡುಗಡೆ ದಿನಾಂಕ ಕೂಡ ಮುಂದೂಡಲಾಗಿದೆ.
ಫೆ.4ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರ ಆಚಾರ್ ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ. ಇದರಲ್ಲಿನ ಮೆಗಾಸ್ಟಾರ್ ಚಿರಂಜೀವಿ ಅವರ ಪಾತ್ರದ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡ ಚಿತ್ರತಂಡ, ‘ಕೊರೊನಾ ಹರಡುತ್ತಿರುವ ಕಾರಣ ಆಚಾರ್ಯ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಬಗ್ಗೆ ಅಪ್ಡೇಟ್ ತಿಳಿಸಲಾಗುವುದು. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಲ್ಲರೂ ಸುರಕ್ಷಿತರಾಗಿರಿ ಎಂದಿದೆ.
The release of #Acharya stands postponed due to the pandemic.
The new release date would be announced soon.
Megastar @KChiruTweets @AlwaysRamCharan #Sivakoratala @MsKajalAggarwal @hegdepooja #ManiSharma #NiranjanReddy @MatineeEnt @KonidelaPro pic.twitter.com/oVjqcvfl9U
— Konidela Pro Company (@KonidelaPro) January 15, 2022