ಮುಸ್ಲಿಂ ಹುಡುಗಿಯರು 16 ವರ್ಷಕ್ಕೆ ಮದುವೆಯಾಗಬಹುದೆಂದ ಪಂಜಾಬ್-ಹರಿಯಾಣ ಹೈಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
16ವರ್ಷ ಪೂರ್ಣಗೊಳಿಸಿದ ಮುಸ್ಲಿಂ ಹುಡುಗಿಯರು ತಮಗಿಷ್ಟವಿರುವ ಪುರುಷನೊದಿಗೆ ವಿವಾಹವಾಗಬಹುದು ಎಂದು ಪಂಜಾಬ್‌ – ಹರಿಯಾಣ ಹೈಕೋರ್ಟ್‌ ಹೇಳಿದೆ.

ಜೂ.8ರಂದು ಪಠಾಣ್‌ಕೋಟ್ ಮೂಲದ ಮುಸ್ಲಿಂ ಯುವಕ ಯುವತಿ ಇಬ್ಬರೂ ಇಸ್ಲಾಂ ವಿಧಿವಿಧಾನಗಳಂತೆ ಮದುವೆಯಾಘಿದ್ದರು. ಆದರೆ ಅವರ ವಿವಾಹವನ್ನು ಎರಡೂ ಕುಟುಂಬಗಳೂ ವಿರೋಧಿಸಿದ್ದವು. ಅನುಮತಿಯಿಲ್ಲದೇ ಮದುವೆಯಾಗಿರುವುದಕ್ಕೆ ಬೆದರಿಕೆ ಹಾಕಿದ್ದರು. ಈ ಕುರಿತು ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಯ ಮನವಿಯ ಮೇರೆಗೆ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

“ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ಕಾರಣಕ್ಕಾಗಿ, ಭಾರತದ ಸಂವಿಧಾನದಲ್ಲಿ ಕಲ್ಪಿಸಿದ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.

ಮುಸ್ಲಿಂ ಹುಡುಗಿಯ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳು ಇಸ್ಲಾಂನ ಶರಿಯಾ ಕಾನೂನುಗಳನ್ನು ಉಲ್ಲೇಖಿಸಿದ್ದಾರೆ.

ಮುಸ್ಲಿಂ ಕಾನೂನಿನಲ್ಲಿ ಪ್ರೌಢಾವಸ್ಥೆ ಮತ್ತು ವಯಸ್ಕ ಎರಡೂ ಒಂದೇ ಆಗಿರುತ್ತದೆ. ಒಬ್ಬ ವ್ಯಕ್ತಿಯು 15ನೇ ವರ್ಷಕ್ಕೆ ವಯಸ್ಕನಾಗುತ್ತಾನೆ ಎನ್ನಲಾಗುತ್ತದೆ ಎಂದು ಅರ್ಜಿದಾರ ದಂಪತಿಗಳು ವಾದಿಸಿದ್ದರು ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!