Thursday, June 1, 2023

Latest Posts

ಅಮೃತಪಾಲ್ ಶರಣಾಗಿದ್ದಲ್ಲ, ನಾವು ಬಂಧಿಸಿದ್ದು: ಐಪಿಜಿ ಸುಖಚೈನ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆತನ ಬಂಧನಕ್ಕೆ ಸಂಬಂಧಿಸಿದ ವಿವರಗಳನ್ನು ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಹೆಡ್‌ಕ್ವಾರ್ಟರ್ಸ್) ಸುಖಚೈನ್ ಸಿಂಗ್ ಗಿಲ್ ಬಹಿರಂಗಪಡಿಸಿದ್ದಾರೆ. ಅಮೃತಪಾಲ್ ಸಿಂಗ್ ಶರಣಾಗಿದ್ದಲ್ಲ, ನಾವು ಬಂಧಿಸಿದ್ದು ಎಂದು ಸ್ಪಷ್ಟಪಡಿಸಿದರು.

ಅಮೃತಪಾಲ್ ಮೋಗಾ ಜಿಲ್ಲೆಯ ರೋಡ್ ಗ್ರಾಮದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ವ್ಯೂಹ ರಚಿಸಿದ ಪೊಲೀಸರು ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿರದಂತೆ ಮಾಡಿ ಭಾನುವಾರ ಬೆಳಗ್ಗೆ 6.45ಕ್ಕೆ ರೋಡ್ ಗ್ರಾಮದಿಂದ ಬಂಧಿಸಿರುವುದಾಗಿ ಸುಖಚೈನ್ ಸಿಂಗ್ ಗಿಲ್ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಮತ್ತು ಅಮೃತಸರ ಗ್ರಾಮಾಂತರ ಪೊಲೀಸರು ಜಂಟಿ ಕಾರ್ಯಾಚರಣೆ ವೇಳೆ ಅಮೃತಪಾಲ್ ರೋಡ್ ಗ್ರಾಮದಲ್ಲಿದ್ದಾರೆ ಎಂದು ಎನ್‌ಎಸ್‌ಎ ಪೊಲೀಸರಿಗೆ ಮಾಹಿತಿ ನೀಡಿದೆ. ಇದರೊಂದಿಗೆ ಎನ್‌ಎಸ್‌ಎ ಮತ್ತು ಪಂಜಾಬ್ ಪೊಲೀಸರು ಜಂಟಿಯಾಗಿ ರೋಡ್ ಗ್ರಾಮವನ್ನು ತಲುಪಿ ಗ್ರಾಮವನ್ನು ಸುತ್ತುವರೆದರು. ಗುರುದ್ವಾರದ ಗೌರವವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಗುರುದ್ವಾರದ ವಿಧಿವಿಧಾನಗಳ ಪ್ರಕಾರ ಪೊಲೀಸರು ಗುರುದ್ವಾರದ ಒಳಗೆ ಹೋಗಲಿಲ್ಲ ಎಂದು ಸುಖಚೈನ್ ಹೇಳಿದ್ದಾರೆ. ಆ ನಂತರ ತಪ್ಪಿಸಿಕೊಳ್ಳಲು ಸಾಧ್ಯವಾಗದ ಕಾರಣ ಅಮೃತ್ ಪಾಲ್ ಸಿಂಗ್ ಅವರನ್ನು ಎನ್‌ಎಸ್‌ಎ ಬಂಧಿಸಿದೆ. ಬಂಧನಕ್ಕೂ ಮುನ್ನ ಅಮೃತಪಾಲ್ ಗುರುದ್ವಾರದೊಳಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಸುಖಚೈನ್, ಗುರುದ್ವಾರದೊಳಗೆ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಬಂಧನದ ನಂತರ ಅಮೃತ್ ಪಾಲ್ ಅವರನ್ನು ಅಸ್ಸಾಂನ ದಿಬ್ರುಗಢ ಜೈಲಿಗೆ ಕಳುಹಿಸಲಾಗುತ್ತಿದೆ ಎಂದರು.

ಪಂಜಾಬ್ ಪೊಲೀಸರು ಅಮೃತ್ ಪಾಲ್ ಸಿಂಗ್ ಗಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ. ಅಮೃತ್ ಪಾಲ್ ಸಿಂಗ್ ಪಂಜಾಬ್ ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ರಾಜ್ಯದ ಎಲ್ಲಾ ಭಾಗಗಳಲ್ಲಿ ಶೋಧ ನಡೆಸಿದ್ದಾರೆ. ಈ ಕ್ರಮದಲ್ಲಿ ಕೆಲ ದಿನಗಳ ಕಾಲ ಪೊಲೀಸರ ರಜೆಯನ್ನೂ ರದ್ದುಗೊಳಿಸಲಾಗಿತ್ತು. ಕೊನೆಗೂ ಒಂದು ತಿಂಗಳ ನಂತರ ಪೊಲೀಸರು ಅಮೃತ್ ಪಾಲ್ ನನ್ನು ರೋಡ್ ಗ್ರಾಮದಲ್ಲಿ ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!