Thursday, June 1, 2023

Latest Posts

VIRAL VIDEO| ಬೀದಿ ಬದಿ ಮಕ್ಕಳಿಗಾಗಿ ಪ್ರತಿದಿನ ಈ ಶೋ ರೂಮ್ ಹುಡುಗರು ಮಾಡುವ ಕೆಲಸ ಮೆಚ್ಚುವಂಥದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೀದಿ ಬದಿ ಮಕ್ಕಳು ದಿನವಿಡೀ ರಸ್ತೆಯಲ್ಲೇ ವಾಸಿಸುತ್ತಾರೆ. ಹೋಟೆಲ್, ಅಂಗಡಿ ಎಲ್ಲಿಗೆ ಹೋಗಬೇಕೆಂದರೂ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಅವರಿಗೆ ಏನು ಸಿಗುವುದಿಲ್ಲ. ಇಂತಹವರಿಗಾಗಿ ಚೆನ್ನೈನ ಎಲೆಕ್ಟ್ರಾನಿಕ್ ಮಳಿಗೆಯೊಂದು ಮಾಡುತ್ತಿರುವ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲೇಬೇಕು.

ಹೆಸರಲ್ಲಿ ದೊಡ್ಡ ನಗರಗಳು.. ಬಡವರ ಸ್ಥಿತಿಯಲ್ಲಿ ಬದಲಾವಣೆ ಇಲ್ಲ. ಇನ್ನೂ ಅನೇಕ ಮಕ್ಕಳು ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಫುಟ್‌ಪಾತ್‌ಗಳ ಬಳಿ ಶೋಚನೀಯ ಸ್ಥಿತಿಯಲ್ಲಿ ಕಾಣುತ್ತಾರೆ. ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕಾಳಜಿ ವಹಿಸುತ್ತೇವೆ ಎಂದು ಹೇಳುತ್ತಿದ್ದರೂ ಕೆಲವು ಮಕ್ಕಳ ಸ್ಥಿತಿ ಇನ್ನೂ ಹದಗೆಟ್ಟಿದೆ. ಶಾಲೆಗೆ ಹೋಗಿ ಪಾಠ ಕಲಿಯುವ ವಯಸ್ಸಿನಲ್ಲಿ ತಮ್ಮ ಬಾಲ್ಯವನ್ನು ನರಕದಲ್ಲಿ, ಭಿಕ್ಷೆ ಬೇಡುತ್ತಾ..ತೂಕ ಹೊರುತ್ತಾ ಕಳೆಯುತ್ತಾರೆ. ಅವರಿಗೆ ಸ್ವಲ್ಪ ಭರವಸೆ, ಆಸೆಗಳಿವೆ ಅದನ್ನು ಕೈಲಾದಷ್ಟು ಈಡೇರಿಸಲು ಚೆನ್ನೈನ ಟಿವಿ ಶೋರೂಮ್ ಈ ಕಾರ್ಯ ಮಾಡುತ್ತಿದೆ. ಟಿವಿ ನೋಡುವ ಹಂಬಲವಿರುವ ಮಕ್ಕಳಿಗೆ ತಮ್ಮ ನೆಚ್ಚಿನ ಚಲನಚಿತ್ರಗಳು ಮತ್ತು ಕಾರ್ಟೂನ್ ಪ್ರದರ್ಶನಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ಕೆಲವು ಸ್ಥಳ ಮತ್ತು ಟಿವಿಗಳನ್ನು ನಿಗದಿಪಡಿಸಲಾಗಿದೆ. ಆ ಸಮಯದಲ್ಲಿ ಬೀದಿ ಮಕ್ಕಳೆಲ್ಲ ಅಲ್ಲಿ ಕೂಡಿ ತಮ್ಮ ನೆಚ್ಚಿನ ಟಿವಿ ಕಾರ್ಯಕ್ರಮಗಳನ್ನು ನೋಡಿ ಆನಂದಿಸುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಬೀದಿ ಮಕ್ಕಳಿಗಾಗಿ ಟಿವಿ ಶೋರೂಂ ಸಂಘಟಕರು ಮಾಡಿರುವ ಉತ್ತಮ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ದೇಶ ಮುನ್ನಡೆಯುತ್ತಿದ್ದರೆ ಇವರ ಪರಿಸ್ಥಿತಿಯಲ್ಲಿ ಬದಲಾವಣೆ ಆಗದೇ ಇರುವುದು ಬೇಸರದ ಸಂಗತಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!