ಪಂಜಾಬ್ ಕಿಂಗ್ಸ್‌ ಕೋಚ್‌ ಸ್ಥಾನದಿಂದ ಅನಿಲ್ ಕುಂಬ್ಳೆ ಹೊರಕ್ಕೆ: ʼವಿಶ್ವಕಪ್‌ ವಿಜೇತ ನಾಯಕʼ ಹೊಸ ಕೋಚ್‌ ಆಗುವ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಐಪಿಎಲ್ 16ನೇ ಆವೃತ್ತಿ ಪ್ರಾರಂಭಕ್ಕೆ ಇನ್ನು ಸುಮಾರು 8 ತಿಂಗಳುಗಳು ಉಳಿದಿವೆ. ಈ ನಡುವೆ ವಿವಿಧ ತಂಡಗಳು ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇತ್ತೀಚೆಗೆ ಹೊಸ ಕೋಚ್ ನೇಮಕ ಮಾಡಿದೆ. ಇದೀಗ ಮತ್ತೊಂದು ತಂಡ ತನ್ನ ಕೋಚಿಂಗ್ ಸಿಬ್ಬಂದಿಯನ್ನು ಬದಲಾಯಿಸಲು ಹೊರಟಿದೆ ಎಂಬ ವರದಿಗಳಿವೆ.
ಪಂಜಾಬ್ ಕಿಂಗ್ಸ್ ಕನ್ನಡಿಗ ಅನಿಲ್ ಕುಂಬ್ಳೆ ಅವರ ಪ್ರಯಾಣವನ್ನು ಕೊನೆಗೊಳಿಸುತ್ತಿದೆ ಎಂಬ ವರದಿಗಳು ಕೇಳಿಬಂದಿವೆ. ಪಂಜಾಬ್ ಕಿಂಗ್ಸ್ (PBKS) ಅನಿಲ್ ಕುಂಬ್ಳೆ ಅವರೊಂದಿಗಿನ ಒಪ್ಪಂದವನ್ನು ಕೊನೆಗಳೊಳಿಸಲು ನಿರ್ಧರಿಸಿದೆ. ಮತ್ತು ಹೊಸ ಸೀಸನ್‌ಗೆ ಮುಂಚಿತವಾಗಿ ಮುಖ್ಯ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ ಎಂದು ವರದಿಯಾಗಿದೆ. ಫ್ರಾಂಚೈಸ್ ಕಳೆದ ನಾಲ್ಕು ಆವೃತ್ತಿಗಳಲ್ಲಿ ಆರನೇ ಸ್ಥಾನವನ್ನು ಗಳಿಸಿದೆ ಮತ್ತು 2014 ರ ಋತುವಿನಿಂದ ಪ್ಲೇಆಫ್‌ಗೆ ಪ್ರವೇಶಿಸಿಲ್ಲ.
ಸೆಪ್ಟೆಂಬರ್ 2022 ರವರೆಗೆ ಚಾಲ್ತಿಯಲ್ಲಿರುವ ಕುಂಬ್ಳೆ ಅವರ ಒಪ್ಪಂದವನ್ನು ನವೀಕರಿಸದಿರಲು ತಂಡದ ಮ್ಯಾನೇಜ್‌ ಮೆಂಟ್‌ ನಿರ್ಧರಿಸಿದೆ. 2019ರ ಆವೃತ್ತಿಯ ಬಳಿಕ ಭಾರತದ ಮಾಜಿ ಲೆಗ್ ಸ್ಪಿನ್ನರ್ ಕುಂಬ್ಳೆ ಅವರು ಮೈಕ್ ಹೆಸ್ಸನ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಫ್ರಾಂಚೈಸಿಯ ಅದೃಷ್ಟದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕುಂಬ್ಳೆ ಕಿಂಗ್ಸ್‌ನ ಮುಖ್ಯ ಕೋಚ್‌ ಸ್ಥಾನಕ್ಕೇರುವ ಮುನ್ನ ಮುಂಬೈ ಇಂಡಿಯನ್ಸ್ (MI) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೋಚಿಂಗ್ ಸ್ಟಾಫ್‌ನಲ್ಲಿದ್ದರು. ಕ್ರಿಕ್‌ಬಝ್‌ನ ವರದಿಯ ಪ್ರಕಾರ, ಪಂಜಾಬ್ ಕಿಂಗ್ಸ್ ಮುಂದಿನ ಋತುವಿನಲ್ಲಿ ಕೋಚ್‌ ಹುದ್ದೆಯನ್ನು ವಹಿಸಿಕೊಳ್ಳಲು ಇಯಾನ್ ಮಾರ್ಗನ್ ಮತ್ತು ಟ್ರೆವರ್ ಬೇಲಿಸ್ ಅವರನ್ನು ಈಗಾಗಲೇ ಸಂಪರ್ಕಿಸಿದೆ.
ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಪ್ರಸ್ತುತ ದಿ ಹಂಡ್ರೆಡ್‌ನಲ್ಲಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. 35ರ ಹರೆಯದ ಅವರು ಇನ್ನೂ ಯಾವುದೇ ತರಬೇತುದಾರ ಹುದ್ದೆಗಳನ್ನು ವಹಿಸಿಕೊಂಡಿಲ್ಲ. ಸ್ಕೈ ಸ್ಪೋರ್ಟ್ಸ್‌ನಲ್ಲಿ ಭಾರತ- ಇಂಗ್ಲೆಂಡ್ ಪ್ರವಾಸದ ವೇಳೆ ಕಾಮೆಂಟರಿ ಮಾಡಿದ್ದರು.
ಮತ್ತೊಂದೆಡೆ, ಟ್ರೆವರ್ ಬೇಲಿಸ್ ಕೋಚ್‌ ಹುದ್ದೆಯಲ್ಲಿ ಅನುಭವಿ. 59 ವರ್ಷ ವಯಸ್ಸಿನ ಅವರು ಕೋಚ್‌ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಐಪಿಎಲ್ ನಲ್ಲಿ ಯಶಸ್ಸು ಕಂಡಿದ್ದಾರೆ. ಮಾರ್ಗನ್ ಅವರ ನಾಯಕತ್ವದಲ್ಲಿ ಇಂಗ್ಲೆಂಡ್ 2019 ರ ವಿಶ್ವಕಪ್ ಗೆದ್ದಾಗ ಅವರು ಕೋಚ್‌ ಆಗಿದ್ದರು.  ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅನ್ನು ಎರಡು ಆವೃತ್ತಿಗಳಲ್ಲಿ ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಸನ್‌ರೈಸರ್ಸ್ ಹೈದರಾಬಾದ್‌ ಎರಡು ಸೀಸನ್‌ಗಳಿಗೆ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.
ಇವೆರಡರ ಹೊರತಾಗಿ ಭಾರತದ ಮಾಜಿ ಕೋಚ್ ಮುಂದೆ ಪ್ರಸ್ತಾವನೆಯನ್ನೂ ಇಡಲಾಗಿದೆ. ಆದರೆ, ಭಾರತದ ಆ ಮಾಜಿ ಕೋಚ್ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಮುಂದಿನ ವಾರದೊಳಗೆ ಹೊಸ ಕೋಚ್ ಬಗ್ಗೆ ಫ್ರಾಂಚೈಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಕೆಕೆಆರ್ ಇತ್ತೀಚೆಗೆ ಆರು ಬಾರಿ ರಣಜಿ ಟ್ರೋಫಿ ವಿಜೇತ ಚಂದ್ರಕಾಂತ್ ಪಂಡಿತ್ ಅವರನ್ನು ಬ್ರೆಂಡನ್ ಮೆಕಲಮ್ ಬದಲಿಗೆ ಮುಖ್ಯ ಕೋಚ್ ಆಗಿ ನೇಮಿಸಿದೆ. ನ್ಯೂಜಿಲೆಂಡ್‌ನ ಮಾಜಿ ಆಟಗಾರ ಐಪಿಎಲ್ 2022 ರ ನಂತರ ಇಂಗ್ಲೆಂಡ್‌ನ ಟೆಸ್ಟ್ ತಂಡದ ತರಬೇತುದಾರರಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಲು ಪಾತ್ರವನ್ನು ತೊರೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!