ಸಚಿವರ ʼಹಣ ಸುಲಿಗೆ ಯೋಜನೆʼ ಆಡಿಯೋ ಟೇಪ್‌ ವೈರಲ್:‌ ಪಂಜಾಬ್‌‌ ನ ಆಪ್ ಸರ್ಕಾರಕ್ಕೆ ತೀವ್ರ ಮುಜುಗರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎಎಪಿ ಕ್ಯಾಬಿನೆಟ್ ಸಚಿವ ಫೌಜಾ ಸಿಂಗ್ ಸರಾರಿ ಮತ್ತು ಅವರ ಆಪ್ತ ಸಹಾಯಕರ ನಡುವೆ ನಡೆದಿದ್ದು ಎನ್ನಲಾದ ಸಂಭಾಷಣೆಯ ಆಡಿಯೊ ಕ್ಲಿಪ್ ಒಂದು ವೈರಲ್ ಆಗಿದ್ದು, ಇದರಲ್ಲಿ ಇಬ್ಬರು ʼಅಧಿಕಾರಿಗಳಿಂದ ಹಣ ಸುಲಿಗೆ ಮಾಡುವ ವಿಧಾನಗಳʼ ಕುರಿತಾಗಿ  ಚರ್ಚಿಸುತ್ತಿರುವುದನ್ನು ಕೇಳಬಹುದಾಗಿದೆ. ಸದ್ಯ ಈ ವಿಡಿಯೋ ಪಂಜಾಬ್‌ ನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಪಂಜಾಬ್‌ ನ ಆಪ್‌ ಸರ್ಕಾರಕ್ಕೆ ಭಾರೀ ಮುಜುಗರ ತಂದೊಡ್ಡಿದೆ.
ಪಂಜಾಬ್‌ ನ ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಅಧಿಕಾರಕ್ಕೆ ಬರುತ್ತಲೇ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದರು. ಯಾರೇ ಹಣ ಕೇಳಲಿ ತಮ್ಮ ಗಮನಕ್ಕೆ ತರುವಂತೆ ಜನರಲ್ಲಿ ಕೋರಿದ್ದರು. ಅಲ್ಲದೇ ಯಾರೇ ಆಗಲಿ ಶೇ. 1 ರಷ್ಟು ಭ್ರಷ್ಟಾಚಾರ ಮಾಡಿರುವುದು ತಿಳಿದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಈಗ ಅವರದ್ದೇ ಸರ್ಕಾರದ ಸಚಿವರದ್ದು ಎಂದು ಹೇಳಲಾಗುತ್ತಿರುವ ವೈರಲ್ ಆಡಿಯೋ ಆಪ್‌ ಪಕ್ಷಕ್ಕೆ ಮುಜುಗರ ತಂದಿದೆ.
ಈ ವೈರಲ್‌ ವಿಡಿಯೋದಲ್ಲಿರುವಂತೆ ಪಂಜಾಬ್ ಸಚಿವ ಫೌಜಾ ಸಿಂಗ್ ಸರಾರಿ ಅವರು ತಮ್ಮ ಸಹಾಯಕ ತಾರ್ಸೆಮ್ ಲಾಲ್ ಕಪೂರ್ ಅವರ ಅವರೊಂದಿಗೆ ಮಾತನಾಡುತ್ತಾ, ʼಅಧಿಕಾರಿಗಳು ಮತ್ತು ಸಾಗಣೆದಾರರಿಂದ ಹಣವನ್ನು ಸುಲಿಗೆ ಮಾಡುವ ಯೋಜನೆಗಳ ಕುರಿತಾಗಿ ಚರ್ಚೆ ನಡೆಸುತ್ತಿದ್ದಾರೆ.
ಈ ವೈರಲ್‌ ಆಡಿಯೋ ಮೂಲಕ ಪಂಜಾಬ್‌ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸ್ವಾತಂತ್ರ್ಯ ಹೋರಾಟಗಾರ ರಕ್ಷಣಾ ಸೇವೆಗಳು, ಕಲ್ಯಾಣ ಆಹಾರ ಸಂಸ್ಕರಣೆ ಮತ್ತು ತೋಟಗಾರಿಕೆ ಇಲಾಖೆಗಳ ಸಚಿವರಾಗಿರುವ ಸರರಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು “ಆಡಿಯೋ ಕ್ಲಿಪ್ ನಕಲಿ ಮತ್ತು ನನ್ನ ವಿರುದ್ಧ ಪಿತೂರಿಯಾಗಿದೆ” ಎಂದು ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ನಕಲಿ ಕ್ಲಿಪ್ ಅನ್ನು ಪ್ರಸಾರ ಮಾಡುವ ಜನರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಆಪ್‌ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ:
ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಿರುವ ಭೋಲಾತ್ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರು ಫೌಜಾ ಸಿಂಗ್ ಸರಾರಿ ಅವರನ್ನು ‌ಸರ್ಕಾರದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ʼಈ ಸಂಭಾಷಣೆಯಲ್ಲಿ, ಸಚಿವರು ಕೆಲವು ಅಧಿಕಾರಿಗಳನ್ನು ಬಲೆಗೆ ಬೀಳಿಸಿ ನಂತರ ಅವರಿಂದ ಲಂಚ ಪಡೆಯುವ ಯೋಜನೆ ಬಗ್ಗೆ ಚರ್ಚಿಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪದ ಮೇಲೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆರೋಗ್ಯ ಸಚಿವ ಡಾ ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಿದ ನಂತರ ಇದು ನಡೆದಿದೆ.
“ಇದು ಮುಕ್ತ ಮತ್ತು ಮುಚ್ಚಿದ ಪ್ರಕರಣ” ಎಂದು ಖೈರಾ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾಜಿ ಆರೋಗ್ಯ ಸಚಿವ ಡಾ ವಿಜಯ್ ಸಿಂಗ್ಲಾ ಅವರೊಂದಿಗೆ ಮಾಡಿದ ರೀತಿಯಲ್ಲಿ ಸಚಿವರನ್ನು ವಜಾಗೊಳಿಸಿ ಬಂಧಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಭೋಲಾತ್ ಶಾಸಕ ಹೇಳಿದರು. ಸಿಂಗ್ಲಾ ವಿರುದ್ಧ ತಮ್ಮ ಬಳಿ ಪುರಾವೆ ಇದೆ ಎಂದು ಸಿಎಂ ಹೇಳಿಕೊಂಡಿದ್ದಾರೆ, ಆದರೆ ಅವರು ಅದನ್ನು ಬಹಿರಂಗಪಡಿಸಿರಲಿಲ್ಲ. ಫೌಜಾ ಸಿಂಗ್ ವಿರುದ್ಧ ಸಾಕ್ಷ್ಯ ಇಲ್ಲಿದೆ ನೋಡಿ ಎಂದು ಖೈರಾ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!