ಭೀಕರ ಕಾರು ಅಪಘಾತದಲ್ಲಿ ಪಂಜಾಬಿ ಗಾಯಕ ನಿರ್ವೀರ್‌ ಸಿಂಗ್‌ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭೀಕರ ಕಾರು ಅಪಘಾತದಲ್ಲಿ ಪಂಜಾಬಿ ಗಾಯಕ ನಿರ್ವೀರ್‌ ಸಿಂಗ್‌ ಮೃತಪಟ್ಟಿದ್ದಾರೆ.
ಆಗಸ್ಟ್ 30ರ ಮಂಗಳವಾರ ಮೆಲ್ಬೋರ್ನ್ʼನ ವಾಯುವ್ಯ ಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.ಈ ಪ್ರದೇಶದಲ್ಲಿ ಅನಿಯಮಿತವಾಗಿ ಚಲಿಸುತ್ತಿದ್ದ ಕಾರು ಡಿಗ್ಗರ್ಸ್ ರೆಸ್ಟ್‌ನಲ್ಲಿ ಇತರ ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಇನ್ನು ಈ ಸಂಬಂಧ ಒಬ್ಬ ಪುರುಷ ಮತ್ತು ಮಹಿಳೆಯನ್ನ ಬಂಧಿಸಲಾಯಿಗಿದ್ದು, ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.
ಪ್ರಸಿದ್ಧ ಪಂಜಾಬಿ ಗಾಯಕ ನಿರ್ವೀರ್ ಸಿಂಗ್ ಅವರು ತಮ್ಮ ಗಾಯನ ವೃತ್ತಿಜೀವನವನ್ನ ಬೆಳೆಸಲು ಸುಮಾರು ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡರು. ಮಂಗಳವಾರ (ಆಗಸ್ಟ್ 31) ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಅತ್ಯಂತ ಅಪಾಯಕಾರಿ ರಸ್ತೆ ಅಪಘಾತವು ಅವರ ಜೀವವನ್ನ ಬಲಿತೆಗೆದುಕೊಂಡಿತು. ನಿರ್ವೀರ್ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದು,ತಂದೆಯ ನಿರ್ಗಮನದ ನಂತ್ರ ಸಂಪೂರ್ಣವಾಗಿ ಏಕಾಂಗಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!