ಏರ್‌ಬಸ್‌ನಿಂದ 250 ವಿಮಾನಗಳ ಖರೀದಿ: ಐತಿಹಾಸಿಕ ಒಪ್ಪಂದ ಎಂದ ಬಣ್ಣಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಫ್ರಾನ್ಸ್‌ನ ವಿಮಾನ ತಯಾರಿಕೆ ಸಂಸ್ಥೆ ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಟಾಟಾ ಸಮೂಹ ಸಂಸ್ಥೆ ಏರ್‌ ಇಂಡಿಯಾ ಮಹತ್ವದ ಒಪ್ಪಂದಕ್ಕೆ (Air India Deal) ಸಹಿ ಹಾಕಿದೆ.
ಈ ಒಪ್ಪಂದವನ್ನು ಐತಿಹಾಸಿಕ ಒಪ್ಪಂದ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಟಾಟಾ ಸನ್ಸ್‌ ಅಧ್ಯಕ್ಷ ಎನ್.ಚಂದ್ರಶೇಖರನ್‌ ಅವರು ಒಪ್ಪಂದದ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ.

ಟಾಟಾ ಗ್ರೂಪ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌, ರತನ್‌ ಟಾಟಾ, ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್‌, ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದರು. ಇದೇ ವೇಳೆ, ಮ್ಯಾಕ್ರನ್‌ ಅವರು ವೈಮಾನಿಕ ಒಪ್ಪಂದ ಹಾಗೂ ಭಾರತದ ಜತೆಗಿನ ಸಂಬಂಧವನ್ನು ಶ್ಲಾಘಿಸಿದರು. ನರೇಂದ್ರ ಮೋದಿ ಅವರೂ, ಇದು ಐತಿಹಾಸಿಕ ಒಪ್ಪಂದವಾಗಿದ್ದು, ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಒಪ್ಪಂದವು ಏಣಿಯಾಗಿದೆ ಎಂದು ಬಣ್ಣಿಸಿದರು.

ಏರ್‌ ಇಂಡಿಯಾ ಒಪ್ಪಂದದ ಪ್ರಕಾರ ಏರ್‌ಬಸ್‌ನಿಂದ ಒಟ್ಟು 250 ವಿಮಾನಗಳನ್ನು ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಏರ್‌ ಇಂಡಿಯಾವನ್ನು ಟಾಟಾ ಗ್ರೂಪ್‌ ಖರೀದಿಸಿದ ಒಂದು ವರ್ಷದಲ್ಲಿಯೇ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಭಾರತದ ವಿಮಾನಯಾನ ಸೇವೆಯು ಮತ್ತಷ್ಟು ಉತ್ಕೃಷ್ಟವಾಗಲಿದೆ ಎಂದೇ ಹೇಳಲಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!