Tuesday, March 28, 2023

Latest Posts

ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್ ಆದೇಶ

ಹೊಸದಿಗಂತ ವರದಿ,ಕಲಬುರಗಿ:

ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದಗಾ೯ದಲ್ಲಿರುವ ಶ್ರೀ ರಾಘವ ಚೈತನ್ಯ ದೇವಸ್ಥಾನದ ಶಿವಲಿಂಗದ ವಿಶೇಷ ಪೂಜೆಗೆ ಇಲ್ಲಿಯ ವಕ್ಫ್ ಟ್ರಿಬೂನಲ್ ನ್ಯಾಯಾಲಯ ಆದೇಶ ನೀಡಿದ್ದು,ಮುಂದಿನ ದಿನಗಳಲ್ಲಿ ದೇವಸ್ಥಾನದ ಜೀಣೋ೯ದ್ದಾರಕ್ಕಾಗಿ ಎರಡನೇ ದತ್ತ ಪೀಠದ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಮಂಗಳವಾರ ನಗರದ ರಾಮ ಮಂದಿರದಲ್ಲಿ ಸಾಂಕೇತಿಕವಾಗಿ ಶ್ರೀ ರಾಮ ಸೇನೆಯ 9 ಜನರು ಮಾಲಾ ಧಾರಣೆ ಮಾಡಿ, ಗಣ ಪೂಜೆ ಹೋಮ ಹವನ ಸಲ್ಲಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇದೇ 18ರಂದು ರಾಘವ ಚೈತನ್ಯ ದೇವಾಲಯದ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲು 15 ಜನ ಹಿಂದೂಗಳಿಗೆ ಕೋರ್ಟ್ ಅನುಮತಿ ನೀಡಿದ್ದು,ಇದೇ 18ರಂದು ಆಳಂದ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಏನಿದು ಪ್ರಕರಣ

ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮಶಾಕ ದಗಾ೯ಗೂ ಮುನ್ನ ಮೂಲತಃ ಇದು ಹಿಂದೂ ದೇವತೆಯ ತಾಣವಾಗಿತ್ತು.ಮೊಘಲರ ಮತ್ತು ಬಹುಮನಿ ಸುಲ್ತಾನರ ಆಕ್ರಮಣದಿಂದ ದೇವಸ್ಥಾನ ದ್ವಂಸವಾಗಿದೆ.ಮುಂದೆ ಮುಸ್ಲಿಂ ಅರಸರು ಅದನ್ನು ಲಾಡ್ಲೆ ಮಶಾಕ್ ದಗಾ೯ವಾಗಿ ನಿಮಾ೯ಣ ಮಾಡಿದ್ದು,ನಂತರ ದೇವಸ್ಥಾನದ ಕುರುಹು ಇಲ್ಲದ ಹಾಗೇ ನಿರಂತರ ಪ್ರಯತ್ನ ಮಾಡಿದ್ದಾರೆ ಎಂದು ಶ್ರೀಗಳು ಆರೋಪಿಸಿದರು.

ಕಳೆದ ವಷ೯ ಇದೇ ಶಿವರಾತ್ರಿ ದಿನದಂದು ಆ ರಾಘವ ಚೈತನ್ಯ ದೇವಸ್ಥಾನದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೋದಾಗ ಅವಕಾಶ ಕೊಡದೆ,ಕೆಲವು ಭಯೋತ್ಪಾದನೆ ಮನಸ್ಸುಳ್ಳ ಮುಸ್ಲಿಂ ಕಿಡಿಗೇಡಿಗಳು ಕೇಂದ್ರ ಸಚಿವ ಭಗವಂತ ಖೂಬಾ,ಸೇರಿದಂತೆ ಇತರರು ಮೇಲೆ ಕಲ್ಲು ತೂರಾಟ ನಡೆಸಿದ್ದರು.ಹೀಗಾಗಿ ಈ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಷಯ ಹೋದಾಗ,ಇಲ್ಲಿಯ ವಕ್ಫ್ ಟ್ರಿಬೂನಲ್ ನ್ಯಾಯಾಲಯ ಶಿವರಾತ್ರಿ ದಿನದಂದೆ 15 ಜನ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿದ್ದು, ಶಾಂತಿಯುತವಾಗಿ ಪೂಜೆ ಮಾಡಲು ಅವಕಾಶ ಕೊಡಬೇಕು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!