Thursday, March 30, 2023

Latest Posts

ಸ್ವದೇಶಿ ನಿರ್ಮಿತ 70 ಪೈಲೆಟ್​ ತರಬೇತಿ ವಿಮಾನ ಖರೀದಿ: ಎಚ್​ಎಎಲ್​ನೊಂದಿಗೆ 6800 ಕೋಟಿ ರೂ.ಗಳ ಒಪ್ಪಂದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆತ್ಮನಿರ್ಭರತೆಯತ್ತ ಸಾಗುತ್ತಿರುವ ಭಾರತ ರಕ್ಷಣಾ ವಲಯದಲ್ಲಿ ಸ್ವದೇಶಿ ನಿರ್ಮಿತ 70 ಪೈಲೆಟ್​ ತರಬೇತಿ ವಿಮಾನ ಖರೀದಿಸಲು ಎಚ್​ಎಎಲ್​ನೊಂದಿಗೆ 6800 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ.

ಇದರ ಜೊತೆಗೆ ಎಲ್​ಎಂಡ್​ಟಿ ಕಂಪನಿಯಿಂದ ತರಬೇತಿಗಾಗಿ 3100 ಕೋಟಿ ರೂ.ಗಳ 3 ಹಡಗುಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದೆ.

ಈ ಮೂಲಕ ಎಚ್​ಎಎಲ್ ಮುಂದಿನ 6 ವರ್ಷಗಳಲ್ಲಿ HTT-40 ತರಬೇತಿ ವಿಮಾನಗಳನ್ನು ಹಸ್ತಾಂತರಿಸಲಿದೆ. ಹಡಗುಗಳು 2026ರಲ್ಲಿ ನೌಕಾ ಸೇವೆಗೆ ಲಭ್ಯವಾಗಲಿವೆ.
023ರ ಮಾರ್ಚ್​ 1 ರಂದು ಪ್ರಧಾನಿ ನೇತೃತ್ವದ ಸಚಿವಸಂಪುಟ ಸಮಿತಿಯಿಂದ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೇ ಎಚ್​ಎಎಲ್ ನಿಂದ ಹಗುರ ಯುದ್ದವಿಮಾನಗಳು ಮತ್ತು ಹಗುರ ಹೆಲಿಕಾಫ್ಟರ್​‌ಗಳನ್ನು ಸೇನೆ ಖರೀದಿ ಮಾಡಿದೆ. 200 ಹಗುರ ಹೆಲಿಕಾಫ್ಟರ್​ಗಳು ಮತ್ತು 500 ಧೃವ ಹೆಲಿಕಾಫ್ಟರ್​ಗಳು ಸೇವೆಯಲ್ಲಿವೆ. ಎಚ್​ಎಎಲ್​ನ ಇನ್ನೊಂದು ತೇಜಸ್​ ಯುದ್ದವಿಮಾನಗಳು ಇಗಾಗಲೇ ಸೇನೆಯ ಬತ್ತಳಿಕೆಯಲ್ಲಿವೆ. ತೇಜಸ್​ ಖರೀದಿಗೆ ಈಜಿಫ್ಟ್, ಇಂಡೋನೇಷಿಯಾ, ಫಿಲಿಫೈನ್ಸ್, ಆಸ್ಟ್ರೇಲಿಯಾ, ಮಲೇಷ್ಯಾ, ಅಮೆರಿಕಾ, ಅರ್ಜೆಂಟೈನಾ ಸೇರಿದಂತೆ ಹಲವು ದೇಶಗಳ ಆಸಕ್ತಿ ತೋರಿಸಿವೆ.

ಎಲ್​ಎಂಡ್​ಟಿ ಕಂಪನಿ ತರಬೇತಿಗಾಗಿ 3 ಹಡಗುಗಳ ಖರೀದಿಯಾಗಲಿದೆ. 2026ರಲ್ಲಿ ಸೇವೆಗೆ ದೊರೆಯಲಿವೆ. ಯುದ್ದ ಹಡುಗುಗಳು, ಹಡುಗು ನಾಶಕಗಳು, ಜಲಾಂತರ್ಗಾಮಿ ತಯಾರಿಕೆ ಮಾಡಲಾಗುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಶೇ. 74ರವರೆಗೆ ವಿದೇಶಿ ಹೂಡಿಕೆಗೆ ಭಾರತ ಸರ್ಕಾರ ಅವಕಾಶ ನೀಡಲಿದೆ. ದೇಶದಲ್ಲೇ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. 780 ರಕ್ಷಣಾ ಉತ್ಪನ್ನಗಳ ಆಮದು ನಿರ್ಬಂಧ ಹಾಕಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!