ಜೈಲಿನಲ್ಲೂ ಮನೀಶ್ ಸಿಸೋಡಿಯಗೆ ಸಂಕಷ್ಟ: ಸತತ 5 ಗಂಟೆ ಇಡಿ ಡ್ರಿಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬಕಾರಿ ನೀತಿ ಹಗರಣ ತಿಹಾರ್ ಜೈಲು ಸೇರಿರುವ ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯ ಅವರನ್ನು ಇಂದು ಇಡಿ ಅಧಿಕಾರಿಗಲು ಜೈಲಿನಲ್ಲೇ ಸತತ 5 ಗಂಟೆ ವಿಚಾರಣೆ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್, ಹೈಕೋರ್ಟ್ ಕದ ತಟ್ಟಿದರೂ ಸಿಸೋಡಿಯಾಗೆ ಜಾಮೀನು ಸಿಗಲಿಲ್ಲ. ಮಾರ್ಚ್ 20ರ ವರೆಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದಾದರೂ ಮನೀಶ್ ಸಿಸೋಡಿಯಾಗೆ ಅಲ್ಲೂ ನೆಮ್ಮದಿ ಇಲ್ಲದಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಷ್ಟಕ್ಕೆ ಇಡಿ ಅಧಿಕಾರಿಗಳ ವಿಚಾರಣೆ ಮುಗಿದಿಲ್ಲ. ಇಡಿ ಅಧಿಕಾರಿಗಳ ವಿಚಾರಣೆ ಕೆಲ ದಿನಗಳ ಕಾಲ ಮುಂದುವರಿಯಲಿದೆ.

ಫೆಬ್ರವರಿ 26ರಂದು ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾರನ್ನು ಬಂಧಿಸಿದ್ದರು. ಇದೀಗ ಇಡಿ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ. ಅತ್ತ ಇಡಿ, ಇತ್ತ ಸಿಬಿಐ ಅಧಿಕಾರಿಗಳಿಂದ ಸಿಸೋಡಿಯಾ ಇದೀಗ ಜೈಲಿನಲ್ಲಿ ಅವಿತುಕೊಳ್ಳಲು ಆಗದೆ, ಇತ್ತ ವಿಚಾರಣೆ ಎದುರಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!