ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಕಾನ್ ಸ್ಟಾರ್ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ರಿಲೀಸ್‌ಗೆ ಸಿದ್ಧವಾಗಿದೆ.ಡಿ.5 ರಂದು ತೆರೆಗೆ ಬರಲಿದೆ.
ಇತ್ತ ತಂಡ ನಾನಾ ರಾಜ್ಯಗಳಿಗೆ ಭೇಟಿ ನೀಡಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಇನ್ನೂ ಕೊಚ್ಚಿಯಲ್ಲಿ ‘ಪುಷ್ಪ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಕನ್ನಡತಿ ರಶ್ಮಿಕಾರನ್ನು ಅಲ್ಲು ಅರ್ಜುನ್ ಹಾಡಿ ಹೊಗಳಿದ್ದಾರೆ. ನಿಮ್ಮ ಈ ಬೆಂಬಲ ಮತ್ತು ಪ್ರೀತಿಯನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತೀನಿ, ಕೊನೆಯ ಕ್ಷಣದವರೆಗೂ ಎಂದು ರಶ್ಮಿಕಾ ಕುರಿತು ಮಾತನಾಡುತ್ತಾ ಅಲ್ಲು ಅರ್ಜುನ್ ಭಾವುಕರಾಗಿದ್ದಾರೆ.
ಕೇರಳ ಹೇಗೆ ನನಗೆ ಮನೆಯಂತೆ ಭಾಸವಾಗುತ್ತದೆಯೋ ಅದೇ ತರಹ ರಶ್ಮಿಕಾ ಸಹ ನನಗೆ ಮನೆಯಂತೆ ಭಾಸವಾಗುತ್ತಾರೆ. ಏಕೆಂದರೆ, ಕಳೆದ 3 ವರ್ಷಗಳಿಂದಲೂ ರಶ್ಮಿಕಾ ಹೊರತಾಗಿ ಇನ್ನೊಬ್ಬ ನಟಿಯನ್ನು ನಾನು ಸೆಟ್‌ನಲ್ಲಿ ನೋಡಿಯೇ ಇಲ್ಲ. 3 ವರ್ಷಗಳಿಂದ ರಶ್ಮಿಕಾ ಜೊತೆ ನಾನು ಕೆಲಸ ಮಾಡುತ್ತಿದ್ದೇನೆ. ಅವರು ಒಂದು ರೀತಿ ನನಗೆ ಮನೆಯ ಅನುಭವ ಕೊಡುತ್ತಾರೆ ಎಂದರು.
ರಶ್ಮಿಕಾ ನ್ಯಾಷನಲ್ ಕ್ರಶ್, ಇಡೀ ದೇಶವನ್ನೇ ಅವರು ಕ್ರಶ್ ಮಾಡಿ ಬಿಟ್ಟಿದ್ದಾರೆ. ಮತ್ತೊಮ್ಮೆ ಇಡೀ ದೇಶದ ಕ್ರಶ್ ಆಗಲಿದ್ದಾರೆ. ನಿಮ್ಮೊಟ್ಟಿಗೆ ಕೆಲಸ ಮಾಡುವುದು ನನಗೆ ಬಹಳ ಸುಲಭ, ಬಹಳ ಕಂಫರ್ಟೆಬಲ್ ಆಗಿತ್ತು ಎಂದು ವೇದಿಕೆಯಲ್ಲಿ ನಟಿಗೆ ಹೇಳಿದ್ದಾರೆ.
ನಿಮ್ಮ ಬೆಂಬಲ ಇಲ್ಲದೆ ಹೋಗಿದ್ದರೆ, ಪುಷ್ಪ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಬೆಂಬಲ ಇರದೇ ಇದ್ದಿದ್ದರೆ ನನಗೆ ನಟಿಸಲು ಸಹ ಆಗುತ್ತಿರಲಿಲ್ಲ. ನಿಮ್ಮ ಈ ಬೆಂಬಲ ಮತ್ತು ಪ್ರೀತಿಯನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತೀನಿ, ಕೊನೆಯ ಕ್ಷಣದವರೆಗೂ ಎಂದು ಅಲ್ಲು ಅರ್ಜುನ್ ಎಮೋಷನಲ್ ಆಗಿದ್ದಾರೆ. ನೀವು ಇರೋದ್ರಿಂದ ‘ಪುಷ್ಪ’ ಸಿನಿಮಾ ಬ್ಯೂಟಿಫುಲ್ ಮತ್ತು ಸ್ಪೆಷಲ್ ಆಗಿದೆ. ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ರಶ್ಮಿಕಾಗೆ ಅಲ್ಲು ಅರ್ಜುನ್ ಹಾಡಿ ಹೊಗಳಿದ್ದಾರೆ.
ಅಂದಹಾಗೆ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಹಲವರು ನಟಿಸಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾ ಡಿ.5ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.