ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಹವಾ ಎಬ್ಬಿಸಿದ ಪುಷ್ಪಾ-2 ಸಿನಿಮಾ ಇದೀಗ ಒಟಿಟಿಗೆ ಆಗಮಿಸಲಿದೆ. ಥಿಯೇಟರ್‌ಗಳಲ್ಲಿ ಈಗಲೂ ಅತ್ಯುತ್ತಮ ಕಮಾಯಿ ಮಾಡುತ್ತಿರುವ ಸಿನಿಮಾವನ್ನು ಮುಂದಿನ ವರ್ಷ ಒಟಿಟಿಗೆ ತರಲಾಗುತ್ತಿದೆ.
ಪುಷ್ಪ 2 ದಿ ರೂಲ್ ಚಿತ್ರವು ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಮುಂದಿನ ವರ್ಷ ಅಂದರೆ 2025 ರ ಜನವರಿ 9 ರಂದು ಸ್ಟ್ರೀಮಿಂಗ್ ಆಗಲಿದೆ ಎಂದು ತಿಳಿದುಬಂದಿದೆ.
ಈ ಚಿತ್ರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ಸಾಮಾನ್ಯವಾಗಿ ಇಂತಹ ದೊಡ್ಡ ಸಿನಿಮಾಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 40-50 ದಿನಗಳ ನಂತರ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತವೆ. ಈ ಚಿತ್ರದ ದಕ್ಷಿಣ ಭಾರತದ ವರ್ಷನ್ ಮೊದಲು ಒಟಿಟಿಯಲ್ಲಿ ಬಿಡುಗಡೆಯಾಗಿ ನಂತರ ಹಿಂದಿ ವರ್ಷನ್ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.