ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಶಕಗಳ ಹಿಂದೆ, ಚೀನಾ ಕಡಿಮೆ ವಾಹನ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಇದೀಗ ಯುರೋಪ್ ರಾಷ್ಟ್ರಗಳನ್ನು ಹಿಂದಿಕ್ಕಿ ಮೊದಲ ಕಾರು ರಫ್ತು ಮಾಡುವ ರಾಷ್ಟ್ರ ಎನಿಸಿಕೊಂಡಿದೆ.
ಚೀನಾ ಕಾರು ಮಾರುಕಟ್ಟೆ ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆ ಒಟ್ಟುಗೂಡಿಸಿದಷ್ಟು ಬೆಳೆದಿದೆ.
ಚೀನಾ ಈಗ ತನ್ನ ದೇಶದ ಗ್ರಾಹಕರಿಗೆ ಅಗತ್ಯವಿರುವ ಎರಡು ಪಟ್ಟು ಹೆಚ್ಚು ಕಾರುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದರ ನಡುವೆ BYD ಯಂತಹ ಚೈನೀಸ್ ಬ್ರ್ಯಾಂಡ್‌ಗಳು ಸುಧಾರಿತ ಎಲೆಕ್ಟ್ರಿಕ್ ಕಾರುಗಳನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತಿರುವುದಕ್ಕಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗುತ್ತಿವೆ.