ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಪುಷ್ಪ 2 ಸಿನಿಮಾ ರಿಲೀಸ್ ಆಗಲು ಸಜ್ಜಾಗಿದ್ದು, ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ಥಿಯೇಟರ್ ಮೇಲೆ ಅಬ್ಬರಿಸೋದು ಪಕ್ಕಾ ಎನ್ನಲಾಗ್ತಿದೆ. ಡಿಸೆಂಬರ್ 5 ರಂದು ಸಿನಿಮಾ ತೆರೆಗೆ ಬರ್ತಿದ್ದು, ಹಲವು ದಾಖಲೆಗಳು ಉಡೀಸ್ ಆಗೋದು ಪಕ್ಕಾ ಎನ್ನಲಾಗ್ತಿದೆ. ಇದರ ನಡುವೆ ಪುಷ್ಪ 3 ಸಿನಿಮಾ ಕೂಡ ಬರಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಖತ್ ಸುದ್ದಿ ಆಗ್ತಿದೆ.
ಪುಷ್ಪ 2 ಸಿನಿಮಾ ರಿಲೀಸ್ಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಹೊಸ ದಾಖಲೆಗಳನ್ನು ಮುರಿದಿದೆ. ಆದ್ರೆ ಪುಷ್ಪ 2 ಚಿತ್ರ ಬಿಡುಗಡೆಗೂ ಮುನ್ನವೇ ಪುಷ್ಪ ಪಾರ್ಟ್ 3 ಸಿನಿಮಾಗೆ ಸಂಬಂಧಿಸಿದಂತೆ ಸುದ್ದಿಗಳು ಹರಿದಾಡುತ್ತಿವೆ.
ಈ ಬಗ್ಗೆ ಬರ್ಲಿನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದು, ಪುಷ್ಪ ‘ಭಾಗ 3’ ಕೂಡ ಬರಲಿದೆ ಎಂದು ಹೇಳಿದ್ದಾರೆ. ‘ಪುಷ್ಪ 2’ ಕ್ಲೈಮ್ಯಾಕ್ಸ್ ನಲ್ಲಿ ‘ಪಾರ್ಟ್-3’ ಕುರಿತ ಕೆಲವು ದೃಶ್ಯಗಳನ್ನು ತೋರಿಸಲಾಗುತ್ತದೆ ಎಂದು ವರದಿ ಆಗಿದೆ.
ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್ ಸಮಾರಂಭದಲ್ಲಿ ನಿರ್ದೇಶಕ ಸುಕುಮಾರ್ ಭಾಗ 3 ಬಗ್ಗೆ ಕುತೂಹಲಕಾರಿ ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳನ್ನು ಉದ್ದೇಶಿಸಿ. ‘ನಿಮ್ಮ ನಾಯಕನಿಗಾಗಿ ಮೂರು ವರ್ಷ ಶ್ರಮಿಸಿದ್ದೇನೆ. ನೀವು ನಿಮ್ಮ ನಾಯಕನನ್ನು ಕೇಳುತ್ತೀರಿ. ನಾನು ನನ್ನ ಸ್ನೇಹಿತನನ್ನು (ಅಲ್ಲು ಅರ್ಜುನ್) ಕೇಳಿದೆ. ಇನ್ನೂ ಮೂರು ವರ್ಷ ಕೊಟ್ಟರೆ ಖಂಡಿತಾ ‘ಪುಷ್ಪ 3’ ಮಾಡುತ್ತೇನೆ ಎಂದಿದ್ದಾರೆ.
ಆದ್ರೆ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರುವ ಫೋಟೋವೊಂದು ಪುಷ್ಪ 3 ಬರೋದು ಪಕ್ಕಾ ಎನ್ನುವ ಸುದ್ದಿಗೆ ಪುಷ್ಠಿ ನೀಡಿದೆ. ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ ಈ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ ತಂಡದೊಂದಿಗೆ ಇರುವ ಫೋಟೋದ ಹಿಂಭಾಗದಲ್ಲಿ ‘ಪುಷ್ಪ 3’ ಶೀರ್ಷಿಕೆ ಕೂಎ ಇದೆ. ಅದರಲ್ಲಿ ‘ಪುಷ್ಪಾ3: ದಿ ರಾಂಪೇಜ್’ ಎಂದು ಬರೆಯಲಾಗಿದೆ.