ಮೈನಸ್ 30 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಪುಶ್‌ಅಪ್ಸ್: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ಅವರು ಲಡಾಖ್‌ನಲ್ಲಿ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಪಾಮಾನದಲ್ಲಿ ಒಂದೇ ಬಾರಿಗೆ 65 ಪುಶ್‌ಅಪ್ಸ್ ಮಾಡಿದ ವಿಡಿಯೋ ಒಂದು ವೈರಲ್ ಆಗಿದೆ.

55 ವರ್ಷದ ಕಮಾಂಡೆಂಟ್, 17,500 ಅಡಿ ಎತ್ತರದಲ್ಲಿ ಒಂದೇ ಬಾರಿಗೆ ಪುಶ್‌ಅಪ್ಸ್ ಪೂರ್ಣಗೊಳಿಸಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಎಷ್ಟೆಲ್ಲಾ ಫೆಸಿಲಿಟಿಗಳಿದ್ದು, ಜಿಮ್‌ನಲ್ಲಿ ಪುಶ್‌ಅಪ್ಸ್ ಮಾಡುವಾಗಲೇ ಉಸಿರಾಡಲಾಗದೇ ಎಷ್ಟೋ ಮಂದಿ ಕಷ್ಟಪಡುತ್ತಾರೆ. ಆದರೆ ಈ ವಾತಾವರಣದಲ್ಲಿ, ಉಸಿರಾಡಲು ಗಾಳಿ ಸಿಗದ ಪ್ರದೇಶದಲ್ಲಿ ಈ ರೀತಿ ಪುಶ್‌ಅಪ್ಸ್ ಮಾಡಿದ್ದು ಅಸಾಮಾನ್ಯ ಎಂದು ಕಮಾಂಡೆಂಟ್‌ನ್ನು ಶ್ಲಾಘಿಸಲಾಗಿದೆ.

ರತನ್ ಸಿಂಗ್ ನೇತೃತ್ವದಲ್ಲಿ ಆರು ಜನರ ತಂಡ ಲಡಾಖ್‌ನ ೨೦ ಸಾವಿರ ಅಡಿಯ ಶಿಖರವನ್ನು ಏರಿದೆ. ಈ ತಂಡ ಯಾವುದೇ ವಿಶೇಷ ಪರ್ವತಾರೋಹಣ ಅಥವಾ ಚಾರಣದ ಉಪಕರಣಗಳಿಲ್ಲದೆ ಈ ತಂಡ ಶಿಖರ ಏರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!