VOICE STATUS | ನಿಮ್ಮ ಧ್ವನಿಯಲ್ಲೇ ಸ್ಟೇಟಸ್ ಹಾಕಿ, ವಾಟ್ಸಾಪ್‌ನಿಂದ ಬರ‍್ತಿದೆ ಹೊಸ ಫೀಚರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನರನ್ನು ಹಿಡಿದಿಟ್ಟುಕೊಳ್ಳೋಕೆ ವಾಟ್ಸಾಪ್ ಸಾಕಷ್ಟು ಫೀಚರ್‌ಗಳನ್ನು ರಿಲೀಸ್ ಮಾಡಿದ್ದು, ಇದೀಗ ಯೂಸರ್ ಫ್ರೆಂಡ್ಲಿಯಾದ ಮತ್ತೊಂದು ಫೀಚರ್‌ನ್ನು ವಾಟ್ಸಾಪ್ ಪರಿಚಯಿಸಿದೆ.

ಭಾರತದಲ್ಲಿ ಸುಮಾರು 550ಮಿಲಿಯನ್ ಯೂಸರ‍್ಸ್ ಇರುವ ವಾಟ್ಸಾಪ್ ಆಂಡ್ರಾಯ್ಡ್ ಫೋನ್‌ಗಳಿಗಾಗಿ ಹೊಸ ಫೀಚರ್ ರಿಲೀಸ್ ಮಾಡಿದೆ. ಈ ಫೀಚರ್‌ನಿಂದ ವಾಯ್ಸ್ ಮೆಸೇಜ್‌ನ್ನು ಸ್ಟೇಟಸ್ ಆಗಿ ಅಪ್‌ಲೋಡ್ ಮಾಡಬಹುದಾಗಿದೆ.

ಈವರೆಗೆ ಸ್ಟೇಟಸ್‌ನಲ್ಲಿ ವಿಡಿಯೋ, ಟೆಕ್ಸ್ಟ್ ಹಾಗೂ ಫೋಟೊ ಮಾತ್ರ ಹಂಚಿಕೊಳ್ಳಬಹುದಾಗಿತ್ತು. ಆದರೆ ಇದೀಗ ವಾಯ್ಸ್ ಕೂಡ ಸ್ಟೇಟಸ್‌ನಲ್ಲಿ ಹಂಚಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!