ಪುಟಾಣಿ ಶ್ರೀಮಾನ್ಯ ಭಟ್ ಮುಡಿಗೆ ‘ಬೆಳದಿಂಗಳ’ ಮಕ್ಕಳ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಡುಪಿ ಜಿಲ್ಲೆಯ ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿ ಕೊಡ ಮಾಡುವ ಮಕ್ಕಳ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಗೆ ಕಡಂದಲೆಯ ಪುಟಾಣಿ ಶ್ರೀಮಾನ್ಯ ಭಟ್ ಆಯ್ಕೆ ಆಗಿದ್ದಾರೆ.
ಸಂಗೀತ, ನೃತ್ಯ, ಭಗವದ್ಗೀತೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅಪಾರ ಭರವಸೆ ಮೂಡಿಸಿರುವ ಈ ಪ್ರತಿಭೆ, ಈಗಾಗಲೆ 60 ಸಂವತ್ಸರಗಳು, 27 ನಕ್ಷತ್ರಗಳು, 12 ರಾಶಿಗಳು, ವಾರದ 7 ಪ್ರತಿನಾಮಗಳು, ಜನರಲ್ ನಾಲೆಜ್, 12 ತುಳು ಮಾಸಗಳು ಕಥೆಗಳು,
ಸುಭಾಷಿತಗಳು, ವಿಷ್ಣು ಸಹಸ್ರನಾಮ ಪಠಣ ಹೇಳುತ್ತಾರೆ. ಇವರು ಕಡಂದಲೆ ಕೆ.ಜಿ ನಾರಾಯಣ ಭಟ್ ಹಾಗೂ ಶ್ರೀ ಕಟೀಲು ದೇವಳದ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣರ ಮೊಮ್ಮಗಳಾಗಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಂಗ್ಲಮಾಧ್ಯಮ ಶಾಲೆಯ ಎಲ್.ಕೆ.ಜಿ ತರಗತಿಯಲ್ಲಿ ಓದುತ್ತಿದ್ದಾರೆ. ಇವರು ಕಡಂದಲೆ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!