ರಷ್ಯಾ ಸೇನೆಯನ್ನು ಮರುಸಜ್ಜುಗೊಳಿಸುತ್ತಿದ್ದಾರೆ ಪುಟಿನ್:‌ ಕೌಶಲಯುಕ್ತ ಮಾಜಿ ಸೈನಿಕರಿಗೂ ಯುದ್ಧಾಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ – ರಷ್ಯಾ ಯುದ್ಧವು ಪ್ರಸ್ತುತ ಏಳನೇ ತಿಂಗಳಿಗೆ ಕಾಲಿಟ್ಟಿದ್ದು ಸದ್ಯಕ್ಕಂತೂ ಯುದ್ಧ ಕೊನೆಗೊಳ್ಳುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಉಭಯ ದೇಶಗಳ ಸೈನ್ಯಗಳಿಗೆ ಭಾರೀ ನಷ್ಟವುಂಟಾಗಿದೆ ಎಂಬುದನ್ನು ಹಲವು ವರದಿಗಳು ಉಲ್ಲೇಖಿಸಿವೆ. ಇವೆಲ್ಲವುಗಳ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ರಷ್ಯಾದ ಸೇನೆಯನ್ನು ಭಾಗಶಃ ಸಜ್ಜುಗೊಳಿಸುವುದಾಗಿ ಘೋಷಿಸಿದ್ದಾರೆ.

ಪೂರ್ವ ಮತ್ತು ದಕ್ಷಿಣ ಉಕ್ರೇನ್‌ನಲ್ಲಿ ರಷ್ಯಾದ ನಿಯಂತ್ರಿತ ಪ್ರದೇಶಗಳು ರಷ್ಯಾದ ಅವಿಭಾಜ್ಯ ಅಂಗಗಳಾಗುವ ಬಗ್ಗೆ ಮತಪ್ರಕ್ರಿಯೆ ನಡೆಸುವ ಯೋಜನೆಗಳನ್ನು ಘೋಷಿಸಿದ ಒಂದು ದಿನದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪುಟಿನ್ ಈ ಘೋಷಣೆಯನ್ನು ಮಾಡಿದ್ದಾರೆ.

“ನಾವು ಭಾಗಶಃ ಸಜ್ಜುಗೊಳಿಸುವಿಕೆಯನ್ನು ಪ್ರಸ್ತಾಪಿಸುತ್ತಿದ್ದೇವೆ. ಅಂದರೆ, ಪ್ರಸ್ತುತ ಮೀಸಲು ಇರುವ ನಾಗರಿಕರು ಮಾತ್ರ ಸೇನೆಗೆ ಸೇರುವ ಬಲವಂತಕ್ಕೆ ಒಳಪಟ್ಟಿರುತ್ತಾರೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದವರಿಗೆ ನಿರ್ದಿಷ್ಟ ಮಿಲಿಟರಿ ವಿಶೇಷತೆ ಮತ್ತು ಸಂಬಂಧಿತ ಅನುಭವವಿರುವವರಿಗೆ ಯುದ್ಧದಲ್ಲಿ ಭಾಗವಹಿಸಲು ಆದೇಶಿಸಲಾಗುತ್ತದೆ” ಎಂದು ಪುಟಿನ್ ಹೇಳಿದ್ದಾರೆ.

“ವಿಮೋಚನೆಗೊಂಡ ಭೂಮಿಯಲ್ಲಿ ಜನರನ್ನು ರಕ್ಷಿಸಲು ರಷ್ಯಾ ತುರ್ತು ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಕಾರಣ ಈ ಕ್ರಮವು ಅಗತ್ಯವಾಗಿದೆ ಎಂದು ಪುಟಿನ್ ಹೇಳಿದ್ದಾರೆ.

ರಷ್ಯಾ ಈ ಪ್ರದೇಶವನ್ನು ವಿಮೋಚನೆಗೊಳಿಸುವ ಗುರಿಯನ್ನು ಹೊಂದಿರುವುದರಿಂದ ಡೊನ್‌ಬಾಸ್‌ನಲ್ಲಿ ಹೋರಾಡುತ್ತಿರುವ ಸ್ವಯಂಸೇವಕರಿಗೆ ಕಾನೂನು ಸ್ಥಾನಮಾನವನ್ನು ನೀಡಲು ಅವರು ತಮ್ಮ ಸರ್ಕಾರಕ್ಕೆ ಆದೇಶಿಸಿದ್ದಾರೆ.

“ಪುಟಿನ್ ರಶಿಯಾದಲ್ಲಿ ಭಾಗಶಃ ಸಜ್ಜುಗೊಳಿಸುವಿಕೆಯನ್ನು ಘೋಷಿಸಿದ್ದಾರೆ, ಅಂದರೆ ಮೊದಲು ಸೇವೆ ಸಲ್ಲಿಸಿದ ಎಲ್ಲಾ ಮೀಸಲುದಾರರನ್ನು ಉಕ್ರೇನ್ ಆಕ್ರಮಣವನ್ನು ಉತ್ತೇಜಿಸಲು ಕರೆಯಲಾಗುವುದು. ಸಜ್ಜುಗೊಳಿಸುವಿಕೆಯು ಇಂದು ಸೆಪ್ಟೆಂಬರ್ 21 ರಂದು ಪ್ರಾರಂಭವಾಗುತ್ತದೆ. ಪಶ್ಚಿಮವು ಎಲ್ಲಾ ಗೆರೆಗಳನ್ನು ದಾಟಿದ್ದು ಇದೀಗ ಪರಮಾಣು ಬ್ಲಾಕ್‌ ಮೇಲ್‌ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪುಟಿನ್‌ ಹೇಳಿರುವುದಾಗಿ ಪಾಶ್ಚಿಮಾತ್ಯ ಪತ್ರಕರ್ತ ಬೋಜನ್ ಪ್ಯಾನ್ಸೆವ್ಸ್ಕಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!