Saturday, October 1, 2022

Latest Posts

25 ದಿನದ ಮಗುವನ್ನು 50 ಸಾವಿರಕ್ಕೆ ಮಾರಿದ ತಂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂದೆಯೊಬ್ಬ ತನ್ನ 25 ದಿನದ ಮಗುವನನೇ 50 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಘಟನೆ ನಡೆದಿದ್ದು, ಮದ್ಯವಸನಿ ತಂದೆ ಬಸವ ತನ್ನ ಮಗುವನ್ನು ಮಾರಾಟ ಮಾಡಿದ್ದಾನೆ. ತಾಯಿ ನಾಗವೇಣಿ ಇದಕ್ಕೆ ವಿರೋಧಿಸಿದರೂ, ಆತ ಮುಂದುವರಿದಿದ್ದಾನೆ. ಈ ವಿಷಯ ಬೆಳಕಿಗೆ ಬಂದಂತೆ, ಹೆಂಡತಿಗೆ ಆರೋಗ್ಯ ಸರಿ ಇಲ್ಲ, ಸಾಲಗಳೂ ಇವೆ. ಅದಕ್ಕೆ ಹಣದ ಅವಶ್ಯಕತೆ ಇತ್ತು, ಹಾಗಾಗಿ ಈ ರೀತಿ ಮಾಡಿದೆ ಎಂದು ಹೇಳಿದ್ದಾನೆ.

ಇದೀಗ ಬಸವ ಪೊಲೀಸರ ಮುಂದೆ ಬೆಂಗಳೂರು ಮೂಲದ ವ್ಯಕ್ತಿಗೆ ಮಗು ನೀಡಿದ್ದೇನೆ, ಅವರ ಅಡ್ರೆಸ್, ಫೋನ್ ನಂಬರ್ ತಿಳಿದಿಲ್ಲ ಎಂದಿದ್ದಾನೆ. ಹೆಂಡತಿಗೆ ಇದು ಇಷ್ಟವಿಲ್ಲದಿದ್ದರೂ ಬಸವ ಮಗು ಮಾರಾಟ ಮಾಡಿದ್ದು, ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!