10,000 ಡಾಲರ್‌ಗಿಂತ ಜಾಸ್ತಿ ವಿದೇಶಿ ಕರೆನ್ಸಿ ಇರಿಸಿಕೊಂಡು ರಷ್ಯಾ ತೊರೆಯುವಂತಿಲ್ಲ ಎಂದು ಆದೇಶಿಸಿದ ಪುಟಿನ್!‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ ಮೇಲಿನ ಆಕ್ರಮಣಕ್ಕೆ ಪ್ರತಿಕಾರವಾಗಿ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಅನೇಕ ಆರ್ಥಿಕ ದಿಗ್ಬಂಧನಗಳನ್ನು ಹೇರಿದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ರಷ್ಯನ್ನರಿಗೆ ಹೊಸ ಆದೇಶ ಹೊರಡಿಸಿದ್ದಾರೆ. 10,000 ಡಾಲರ್‌ಗಿಂತಲೂ ಹೆಚ್ಚಿನ ಮೊತ್ತದ ವಿದೇಶಿ ಕರೆನ್ಸಿಯನ್ನು ತಮ್ಮಬಳಿ ಇರಿಸಿಕೊಂಡು ರಷ್ಯನ್ ನಾಗರೀಕರು ದೇಶವನ್ನು ತೊರೆಯುವಂತಿಲ್ಲ ಎಂದು ಆದೇಶಿಸಿದ್ದಾರೆ. ಅಮೇರಿಕಾ ಮತ್ತು ಮತ್ತು ಮಿತ್ರರಾಷ್ಟ್ರಗಳ ಕಠಿಣ ಆರ್ಥಿಕ ನಿರ್ಬಂಧಗಳಿಂದ ವಿದೇಶಗಳೊಂದಿಗಿನ ವ್ಯಾಪಾರ, ವಹಿವಾಟಿಗೆ ಸಮಸ್ಯೆಗಳೆದುರಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪುಟಿನ್‌ ಈ ಕ್ರಮ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!