ಜನಸಂಖ್ಯೆ ಹೆಚ್ಚಿಸಲು ಪುಟಿನ್ ಪ್ಲ್ಯಾನ್: ಕನಿಷ್ಠ ಎಂಟು ಮಕ್ಕಳನ್ನು ಹೆರುವ ಸಲಹೆ ನೀಡಿದ ರಷ್ಯಾ ಅಧ್ಯಕ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಲು ಪ್ರತೀ ಮಹಿಳೆಯೂ ಕನಿಷ್ಠ ಎಂಟು ಮಕ್ಕಳನ್ನು ಹೆರಬೇಕು ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾದ ಪ್ರತೀ ವಿವಾಹಿತ ಮಹಿಳೆ ಕನಿಷ್ಟ ಎಂಟು ಮಕ್ಕಳನ್ನು ಹೆತ್ತರೆ ದೇಶದಲ್ಲಿ ಜನಸಂಖ್ಯೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದಿದ್ದಾರೆ.

ಉಕ್ರೇನ್ ಜೊತೆ ಯುದ್ಧ ಆರಂಭವಾದಾಗ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಎಂಟರಿಂದ ಒಂಬತ್ತು ಲಕ್ಷ ಮಂದಿ ದೇಶ ತೊರೆದಿದ್ದಾರೆ.

ನಮ್ಮ ಮುತ್ತಜ್ಜಿ, ಅವರ ಅಮ್ಮ, ಅವರ ಅಜ್ಜಿ ಎಲ್ಲರೂ ಎಂಟು, ಒಂಬತ್ತು ಮಕ್ಕಳನ್ನು ಹೊಂದಿರಲಿಲ್ಲವೇ? ಅದರಿಂದಲೇ ತಾನೆ ದೊಡ್ಡ ಕುಟುಂಬಗಳು ಹುಟ್ಟಿದ್ದು. ಅದೇ ರೀತಿ ನಮ್ಮ ಸಂಪ್ರದಾಯವನ್ನು ರಕ್ಷಿಸಬೇಕು, ದೊಡ್ಡ ಕುಟುಂಬವನ್ನು ಹೊಂದಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!