ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ, ರಣ್ಬೀರ್ ಕಪೂರ್, ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿ ಇರುವ ಅನಿಮಲ್ ಸಿನಿಮಾ ನೆನ್ನೆಯಷ್ಟೇ ತೆರೆಕಂಡಿದೆ.
ಸಿನಿಮಾ ನೋಡಿದ ಫ್ಯಾನ್ಸ್ ಸಖತ್ ಒಳ್ಳೆಯ ರಿವ್ಯೂ ನೀಡಿದ್ದು, ಮೊದಲ ದಿನವೇ ಸಿನಿಮಾ 61 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನವೇ ಇಷ್ಟೊಂದು ಗಳಿಕೆ ಮಾಡೋದು ಯಾವ ಸಿನಿಮಾಕ್ಕೂ ಸುಲಭದ ವಿಚಾರ ಅಲ್ಲ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಗೆಲುವು ಕಂಡಿದ್ದು, ರಶ್ಮಿಕಾ ಮಂದಣ್ಣ ವೃತ್ತಿ ಜೀವನದಲ್ಲಿ ಯಾವ ಸಿನಿಮಾ ಕೂಡ ಮೊದಲ ದಿನ ಇಷ್ಟು ಗಳಿಕೆ ಮಾಡಿಲ್ಲ.
ಮೊದಲ ದಿನವೇ 60 ಕೋಟಿ ದಾಟಿದ ಅನಿಮಲ್ ಶೀಘ್ರದಲ್ಲೇ ನೂರು ಕೋಟಿ ಕ್ಲಬ್ ಸೇರೋದ್ರಲ್ಲಿ ಅನುಮಾನ ಇಲ್ಲ. ಹಿಂದಿ ಭಾಷೆಯಲ್ಲೇ 50 ಕೋಟಿ ಗಳಿಕೆಯಾಗಿದ್ದು, ಉಳಿದ ಭಾಷೆಗಳಿಂದಾಗಿ 11 ಕೋಟಿ ಗಳಿಕೆಯನ್ನು ಅನಿಮಲ್ ಸಿನಿಮಾ ಗಳಿಸಿದೆ.