Tuesday, August 16, 2022

Latest Posts

ಕನಕಪುರ ತಹಶೀಲ್ದಾರ್ ವರ್ಗಾವಣೆಗೆ ಪುಟ್ಟಸ್ವಾಮಿ ಆಗ್ರಹ

ಹೊಸದಿಗಂತ ವರದಿ, ರಾಮನಗರ :
ಆರ್‌ಆರ್‌ಟಿ ಪ್ರಕರಣ ಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸದೇ ನೂರಾರು ಸಂಖ್ಯೆಯ ಪ್ರಕರಣಗಳನ್ನು
ಯಥಾ ಸ್ಥಿತಿಯಲ್ಲಿಟ್ಟು ಕಾಲಹರಣ ಮಾಡಿರುವ ಹಾಗೂ ಬಡ ರೈತರ ಕುಟುಂಬ ಜೀವನಕ್ಕೆ
ಕಂಟಕ ಪ್ರಾಯವಾಗಿರುವ ತಹಸೀಲ್ದಾರ್ ವರ್ಗಾವಣೆ ಮಾಡುವಂತೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ
ವಿರೋಧಿ ಸಂಸ್ಥೆ ರಾಮನಗರ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಅವರು ಒತ್ತಾಯಿಸಿದ್ದಾರೆ.
ನಗರದ ಕನಕಪುರದಲ್ಲಿ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ರೈತರ ಯಾವುದೇ ಪ್ರಕರಣಗಳ ಯಾವುದೇ ಪ್ರತಿವಾದಿ ಮತ್ತು ವಾದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ನ್ಯಾಯಾಲಯದ ಗುಮಾಸ್ತರು ಒಂದು ಪ್ರಕರಣದ ಇತ್ಯಾರ್ಥಕ್ಕೆ ಇಂತಿಷ್ಟು ಹಣವನ್ನು ನೀಡಬೇಕೆಂದು ಬಡ ರೈತರಿಗೆ ಒತ್ತಾಯ ಮಾಡುತ್ತಾರೆ. ಕೊಡದೇ ಹೋದರೆ ರೈತರ ಪ್ರಕರಣಗಳನ್ನು ಯಥಾಸ್ಥಿತಿಯಲ್ಲಿ ತೊಂದರೆ ಕೊಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಪ್ರಕರಣಗಳು ಆದೇಶ ಪಡೆಯಲು ಹತ್ತಾರು ವರ್ಷಗಳ ಸಮಯ ತೆಗೆದುಕೊಂಡರೆ ಇಳಿವಯಸ್ಸಿನಲ್ಲಿ ರೈತರು ಹೇಗೆ ತಾನೇ ಬದುಕು ಕಟ್ಟಿಕೊಳ್ಳಲು ಸಾಧ್ಯ. ಕಳೆದ ಒಂದೂವರೆ ವರ್ಷಗಳಿಂದ ಕನಕಪುರ ತಹ ಲ್ದಾರ್ ಆಗಿ ಬಂದಿರುವ ಈ ವ್ಯಕ್ತಿಯೇ ಕಾರಣಕರ್ತರು.
ತಾಲ್ಲೂಕು ಕಚೇರಿಯ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು ರೈತರು ತಮ್ಮ ಅನೇಕ ಸಮಸ್ಯೆಗಳನ್ನು ಪರಿಹಾರ ನೀಡುವಂತೆ ಕೊಟ್ಟಿರುವ ಸಾವಿರಾರು ಅರ್ಜಿಗಳನ್ನು ಪರಿಶೀಲಿಸದೇ ಕಸದ ಬುಟ್ಟಿ್ಟಗೆ ಹಾಕಿದ್ದಾರೆ. ಜಮೀನು ಏರು-ಪೇರಿನ ಸರಿಪಡಿಸುವಂತೆ ನೀಡಿರುವ ಅರ್ಜಿಗಳು ನಾಲ್ಕು ವರ್ಷಗಳಾದರೂ ಇತ್ಯರ್ಥ ಮಾಡಿಲ್ಲ. ಇಂತಹ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಆಡಳಿತ ಸಂಪೂರ್ಣ ವಿಫಲ ಕಂಡಿದೆ. ಕನಕಪುರ ತಾಲೂಕಿನ ಸರ್ವೇ ಇಲಾಖೆ ಮತ್ತು ತಹಶೀಲ್ದಾರ್ ಕಚೇರಿಗೆ ಗರಬಡಿದಿದೆ. ಇಂತಹ ರೈತರ ವಿರೋಧಿ ತಹಸೀಲ್ದಾರ್ ಅವರನ್ನು ಸರ್ಕಾರ ಕೂಡಲೇ ವರ್ಗಾವಣೆ ಮಾಡಿ ಸೂಕ್ತವಾದ ರೈತರ
ಪರ ಕೆಲಸ ಮಾಡುವ ಅಧಿಕಾರಿಯನ್ನು ನಿಯೋಜಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು.
ಗೋಷ್ಠಿಯಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲ್ಲೂಕು ಶಾಖೆಯ ಅಧ್ಯಕ್ಷ ಮಹೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ.ಗಣೇಶ್, ರಾಮನಗರ ತಾಲ್ಲೂಕು ಅಧ್ಯಕ್ಷ ಎಲ್.ಚಂದ್ರಶೇಖರ್, ಕನಕಪುರ ಅಧ್ಯಕ್ಷ ವೆಂಕಟರಮಣಸ್ವಾಮಿ
ಮಾಗಡಿ ಅಧ್ಯಕ್ಷ ಉಮಾಶಂಕರ್, ಮುಬಾರಕ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss