ಆಹಾ..! ಯಾದಮ್ಮನ ಕೈರುಚಿ: ಮೋದಿಗಾಗಿ ತೆಲಂಗಾಣ ಸಾಂಪ್ರದಾಯಿಕ ಅಡುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ತೆಲಂಗಾಣದಲ್ಲಿ ಸಾಂಪ್ರದಾಯಿಕ ಅಡುಗೆಯ ರುಚಿ ತೋರಿಸಲು ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ಮಾಂಸಾಹಾರವನ್ನು ದೂರವಿಟ್ಟು, ಸಂಪೂರ್ಣ ಸಸ್ಯಾಹಾರಿ ಖಾದ್ಯಗಳೊಂದಿಗೆ ಮೆನುವನ್ನು ಸಿದ್ಧಪಡಿಸಲಾಗಿದೆ. ಕರೀಂನಗರ ಜಿಲ್ಲೆಯ ಹುಸ್ನಾಬಾದ್ ಕ್ಷೇತ್ರದ ಗೌರವೆಲ್ಲಿ ಗುಡತಿಪಲ್ಲಿಯ ʻಯಾದಮ್ಮʼ ಪ್ರಧಾನಿಗೆ ತೆಲಂಗಾಣದ ಅಡುಗೆಯ ರುಚಿ ತೋರಿಸಿದ್ದಾರೆ.

Bjp National Executive Meeting 2022: Karimnagar Yadamma Selected To Cook Telangana Traditional Recipes For PM Modi | Yadamma Reciepes: మోదీకి యాదమ్మ చేతి రుచులు, దిగ్గజ చెఫ్‌లను కాదని సామాన్యురాలితో ...

ಸುಮಾರು 50 ಬಗೆಯ ಖಾದ್ಯಗಳನ್ನು ತಯಾರಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಸ್ವತಃ ಖಾದ್ಯಗಳ ರುಚಿ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೊಡ್ಡ ವ್ಯಕ್ತಿಗಳು ನನ್ನ ಅಡುಗೆಯ ರುಚಿ ಸವಿದಿರುವುದು ನನ್ನ ಪಾಲಿನ ಪುಣ್ಯ. ನನಗೆ ಈ ಅವಕಾಶ ಕಲ್ಪಿಸಿದ ಬಂಡಿ ಸಂಜಯ್ ಅವರಿಗೆ ಋಣಿಯಾಗಿದ್ದೇನೆ ಎಂದಿದಾರೆ ಯಾದಮ್ಮ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಭಾನುವಾರ ಮಧ್ಯಾಹ್ನ ಅತಿರಥ ಮಹಾರಥರು ಸಿಹಿತಿಂಡಿ ಸೇರಿದಂತೆ ಸುಮಾರು 50 ಬಗೆಯ ಖಾದ್ಯಗಳನ್ನು ಸವಿದಿದ್ದಾರೆ. ಇವೆಲ್ಲವನ್ನೂ ಯಾದಮ್ಮ ಅವರೇ ಮಾಡಿರುವುದು ಗಮನಾರ್ಹ.

ಊಟದ ಮೆನು:

ಚಿಕ್ಕುಡುಕಾಯಿ ಟೊಮ್ಯಾಟೊ, ಆಲೂ ಕೂರ್ಮಾ
ಬದನೆಕಾಯಿ ಮಸಾಲಾ,  ತೊಂಡೇಕಾಯಿ ಹಸಿಕೊಬ್ಬರಿ ಫ್ರೈ
ಬೆಂಡೇಕಾಯಿ ಕಾಜು ಫ್ರೈ, ತೋಟಕೂರ ಟೊಮ್ಯಾಟೊ ಫ್ರೈ
ಬೀರೆಕಾಯಿ ಮೀಲ್‌ ಮೇಕರ್‌ ಫ್ರೈ, ಮೆಂತ್ಯೆ ಹೆಸರುಕಾಳು ಫ್ರೈ
ಮಾವಿನಕಾಯಿ ಪಪ್ಪು, ಸಾಂಬಾರ್‌, ಮುದ್ದಪಪ್ಪು
ಪಚ್ಚಿಪುಲುಸು, ಬಗಾರಾ, ಪುಲಿಹೋರಾ,
ಪುದೀನಾ ರೈಸ್‌, ವೈಟ್‌ ರೈಸ್‌, ಮೊಸರನ್ನ
ಗೋಂಗೂರ ಪಚ್ಚಡಿ, ಸೌತೆಕಾಯಿ ಚಟ್ನಿ, ಟೊಮ್ಯಾಟೊ ಚಟ್ನಿ, ಸೋರೆಕಾಯಿ ಚಟ್ನಿ,
ಕಡಲೇಬೀಜದ ಚಟ್ನಿ, ಹಸಿ ತೆಂಗಿನಕಾಯಿ ಚಟ್ನಿ, ಹಸಿ ಮೆಣಸಿನ ಕಾಯಿ ಫ್ರೈ

ಸಿಹಿ ತಿನಿಸು

ಬೆಲ್ಲದ ಪರಮಾನ್ನ
ಶ್ಯಾವಿಗೆ ಪಾಯಸ
ಹೋಳಿಗೆ
ಬೂರೆಲು
ಕಜ್ಜಾಯ

ಕುರುಕುಲು ತಿಂಡಿ:

ಉದ್ದಿನ ವಡೆ
ಮಿರ್ಚಿ ಬಜ್ಜಿ
ಚಕ್ಕುಲಿ
ಖಾರ ಬೂಂದಿ
ನಿಪ್ಪಟ್ಟು

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!