ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಮೈಸೂರಿನಲ್ಲಿ ಶ್ರೀಗಂಧದ ಸೋಪ್ ತಯಾರಿಸಿ ಹೆಸರು ಮಾಡಿರುವ ಕೆಎಸ್&ಡಿಎಲ್ ಇದೀಗ ದೇಶದಲ್ಲೇ ಅತ್ಯಂತ ದುಬಾರಿ ಸಾಬೂನು ತಯಾರಿಸಲು ಮುಂದಾಗಿದೆ. ಮೈಸೂರು ಸ್ಯಾಂಡಲ್ ಸೋಪನ್ನು ನಕಲು ಮಾಡುವವರಿಗೆ ಚಾಟಿಯೇಟು ಬೀಸಲು ಹೊಸ ಯೋಜನೆ ರೂಪಿಸಿದೆ.
ಶ್ರೀಗಂಧದ ಸುವಾಸನೆಯ ಸೋಪ್ ವಿದೇಶದಲ್ಲಿಯೂ ಸದ್ದು ಮಾಡಿದೆ. ಇದೀಗ, ಕೆಎಸ್&ಡಿಎಲ್ ಭಾರತದಲ್ಲಿ ಅತ್ಯಾಧುನಿಕ ಸಾಬೂನುಗಳನ್ನು ತಯಾರಿಸುವ ಯೋಜನೆಯೊಂದಿಗೆ ಬಂದಿದ್ದು, ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಉತ್ತಮ ಗುಣಮಟ್ಟದ ಮೈಸೂರು ಶ್ರೀಗಂಧದ ಸಾಬೂನು ಬಹಳಷ್ಟು ಶ್ರೀಗಂಧದ ಎಣ್ಣೆಯೊಂದಿಗೆ ಮಾರುಕಟ್ಟೆಗೆ ಬರಲಿದೆ.
ಮೈಸೂರು ಶ್ರೀಗಂಧದ ಸಾಬೂನು ನಕಲು ಮಾಡಿ ಮಾರಾಟ ಮಾಡುವ ವ್ಯವಸ್ಥಿತ ಜಾಲ ರಾಜ್ಯದ ಹೊರಗೂ ವಿಸ್ತರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಂಸ್ಥೆ ಮುಂದಾಗಿದೆ. ಸಾಬೂನಿಗೆ ವಿಶೇಷ ಕ್ಯೂಆರ್ ಕೋಡ್ ಅನ್ನು ಎರಡು ವಾರಗಳಲ್ಲಿ ಅಳವಡಿಸಲಾಗುವುದು. ಇದು ನಕಲಿ ಮತ್ತು ಅಸಲಿ ಉತ್ಪನ್ನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಈ ನಕಲಿ ಜಾಲದ ಮೇಲೆ ನಿಗಾ ಇಡಲು ತಂಡವನ್ನೂ ಕೂಡ ಈಗಾಗಲೇ ರಚಿಸಲಾಗಿದೆ.