June 30, 2026
Tuesday, June 30, 2026
spot_img

Qualifier 2: ಫೈನಲ್‌ ಟಿಕೆಟ್‌ಗಾಗಿ ಗುಜರಾತ್-ರಾಜಸ್ಥಾನ್ ಮಹಾಕಾಳಗ: RCB ಫೈನಲ್ ಎದುರಾಳಿ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಚಾಂಪಿಯನ್ ಪಟ್ಟ ಯಾರಿಗೆ ಸಿಗಲಿದೆ ಎಂಬ ಕುತೂಹಲ ಈಗ ಉತ್ತುಂಗಕ್ಕೇರಿದೆ. ಮೇ 31ರಂದು ನಡೆಯಲಿರುವ ಮೆಗಾ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವ ಮತ್ತೊಂದು ಅದೃಷ್ಟಶಾಲಿ ತಂಡ ಯಾವುದು ಎಂಬುದು ಇಂದೇ ನಿರ್ಧಾರವಾಗಲಿದೆ. ಇಂದು ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ.

ನ್ಯೂ ಚಂಡೀಗಢದಲ್ಲಿ ‘ಮಾಡು ಇಲ್ಲವೇ ಮಡಿ’ ಹೋರಾಟ:

ನ್ಯೂ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೂ ಇದು ‘ಡೂ ಆರ್ ಡೈ’ ಮ್ಯಾಚ್ ಆಗಿದ್ದು, ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಇಂದಿನ ಪಂದ್ಯದಲ್ಲಿ ಸೋತ ತಂಡದ ಐಪಿಎಲ್ 2026ರ ಜರ್ನಿ ಇಲ್ಲಿಗೆ ಮುಕ್ತಾಯವಾಗಲಿದೆ.

ಗುಜರಾತ್ vs ರಾಜಸ್ಥಾನ್: ಹೆಡ್ ಟು ಹೆಡ್ ರೆಕಾರ್ಡ್ಸ್:

ಪ್ರಸಕ್ತ ಸೀಸನ್‌ನಲ್ಲಿ ಉಭಯ ತಂಡಗಳ ಹಾದಿ ವಿಭಿನ್ನವಾಗಿತ್ತು. ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಆರಂಭದಲ್ಲಿ ಏರಿಳಿತ ಕಂಡರೂ, ನಂತರ ಸತತ ಗೆಲುವುಗಳೊಂದಿಗೆ 18 ಅಂಕಗಳನ್ನು ಗಳಿಸಿ ಪ್ಲೇ-ಆಫ್ ತಲುಪಿದೆ. ಇತ್ತ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ಆರಂಭಿಕ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿತಾದರೂ, ಮಧ್ಯದಲ್ಲಿ ದಿಢೀರ್ ಫಾರ್ಮ್ ಕಳೆದುಕೊಂಡು ಕಷ್ಟಪಟ್ಟಿತ್ತು.

ಈ ಸೀಸನ್‌ನಲ್ಲಿ ಇವೆರಡೂ ತಂಡಗಳು ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿವೆ. ಏಪ್ರಿಲ್ 4 ರಂದು ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ರನ್‌ಗಳ ರೋಚಕ ಜಯ ಸಾಧಿಸಿತ್ತು. ಆದರೆ, ಮೇ 9ರಂದು ನಡೆದ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದ್ದ ಗುಜರಾತ್ ಟೈಟನ್ಸ್, ರಾಜಸ್ಥಾನ ತಂಡವನ್ನು ಕೇವಲ 152 ರನ್‌ಗಳಿಗೆ ಆಲೌಟ್ ಮಾಡಿ, 77 ರನ್‌ಗಳ ಭರ್ಜರಿ ವಿಜಯ ದಾಖಲಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !