ಇದು ಕಾರ್ಪೆಟ್ ಅಲ್ಲ..ಡಾಂಬರು ರಸ್ತೆ: ಈ ಹೊಸ ರಸ್ತೆ ನೋಡಿದ್ರೆ ಬೆಚ್ಚಿ ಬೀಳ್ತೀರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರಕ್ಕೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಹಳ್ಳಿಯೊಂದರಲ್ಲಿ ಜನ ರಸ್ತೆಯನ್ನು ಕಂಬಳಿಯಂತೆ ಸುತ್ತುತ್ತಿರುವುನ್ನು ಕಾಣಬಹುದು. ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುವ ಈ ವಿಡಿಯೋ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಕರ್ಜತ್ ಮತ್ತು ಹಸ್ತ್ ಪೋಖಾರಿ ಗ್ರಾಮದಲ್ಲಿ, ಅಧಿಕಾರಿಗಳು ಇತ್ತೀಚೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ರಸ್ತೆಗಳ ನಿರ್ಮಾಣವನ್ನು ಪ್ರಾರಂಭಿಸಿದ್ದರು. ಪಾಲಿಥಿನ್ ಡಾಂಬರು ಹಾಕಿ ನಿರ್ಮಿಸಿರುವ ಈ ರಸ್ತೆಯ ಕಳಪೆ ಗುಣಮಟ್ಟ ಎದ್ದು ಕಾಣುತ್ತಿದೆ. ರಸ್ತೆಗೆ ಕಾರ್ಪೆಟ್ ಮಾಡಲಾಗಿದೆ ಎಂದು ಗ್ರಾಮಸ್ಥರು ತೆಗೆದಿರುವ ವಿಡಿಯೋ ಜನರನ್ನು ಬೆಚ್ಚಿ ಬೀಳಿಸುವಂತಿದೆ.

‘ಗುತ್ತಿಗೆದಾರರ ಹಗರಣ ಕಣ್ಣು ತೆರೆಸುತ್ತಿದೆ’ ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಕೂಡಲೇ ಕಾಮಗಾರಿ ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!