ಆಲಿಯಾ ಭಟ್ ‘ಸೂಪರ್ ಹೀರೋ’ ನರೇಂದ್ರನಾಥ್ ರಾಝ್‌ದಾನ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಲಿಯಾ ಭಟ್ ಸೂಪರ್ ಹೀರೋ ನರೇಂದ್ರನಾಥ್ ರಾಝ್‌ದಾನ್ ಇಂದು ಕೊನೆಯುಸಿರೆಳೆದಿದ್ದಾರೆ. ನಟಿ ಆಲಿಯಾ ಭಟ್ ತಾಯಿ ಸೋನಿ ಅವರ ತಂದೆಯಾದ ನರೇಂದ್ರನಾಥ್ ಬಗ್ಗೆ ಆಲಿಯಾ ಭಾವನಾತ್ಮಕ ಪೋಸ್ಟ್ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ.

ನನ್ನ ತಾತ, ನನ್ನ ಸೂಪರ್ ಹೀರೋ 93 ವರ್ಷದವರೆಗೂ ಕೆಲಸ ಮಾಡಿದ್ದಾರೆ, ಗಾಲ್ಫ್ ಆಡಿದ್ದಾರೆ, ಬೆಸ್ಟ್ ಆಮ್ಲೆಟ್ ಮಾಡಿಕೊಟ್ಟಿದ್ದಾರೆ, ಉತ್ತಮ ಕಥೆಗಳನ್ನು ಹೇಳಿದ್ದಾರೆ, ವೈಲಿನ್ ನುಡಿಸಿದ್ದಾರೆ, ಮರಿಮೊಮ್ಮಗಳ ಜೊತೆ ಆಡಿದ್ದಾರೆ, ಕ್ರಿಕೆಟ್, ಚಿತ್ರಕಲೆ ಉಸಿರಾಗಿತ್ತು. ಕಡೆಯವರೆಗೂ ನಮ್ಮನ್ನು ಪ್ರೀತಿಸಿದ್ದಾರೆ. ಅವರ ಜೀವನವನ್ನು ಆಸ್ವಾದಿಸಿದ್ದಾರೆ. ನನ್ನ ಮನಸ್ಸಿನ ತುಂಬಾ ದುಃಖ ಇದೆ, ಆದರೆ ಖುಷಿಯೂ ಇದೆ, ಅವರಿಂದ ಪಡೆದ ಪಾಠಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆ, ಮತ್ತೆ ಸಿಗೋಣ ತಾತ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!