ಮೇಷ.
ಸಂತೋಷದಿಂದ ದಿನದ ಆರಂಭ. ಕೆಲಸ ಸುಗಮ.ಸಹೋದ್ಯೋಗಿ ಗಳಿಂದ ಹೊಸ ಕಲಿಕೆ. ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಿ.
ವೃಷಭ
ಬಿಡುವಿಲ್ಲದ ದಿನ. ಪ್ರಯತ್ನ ಸಫಲ. ಶ್ಲಾಘನೆ. ವೃತ್ತಿ ಸಂಬಂಧ ಪ್ರಯಾಣ ಸಂಭವ. ಮಾತಿನ ಚಕಮಕಿ ನೆಮ್ಮದಿ ಕಸಿಯಬಹುದು. ಸಹನೆ ಕಾಯ್ದುಕೊಳ್ಳಿ.
ಮಿಥುನ
ಪ್ರತಿನಿಮಿಷ ನಿಮ್ಮ ಬದುಕಲ್ಲಿ ಬದಲಾವಣೆ ಉಂಟಾದೀತು. ಸಂಗಾತಿ ಹುಡುಕಾಟ ಸಫಲ. ಕಹಿ ಅನುಭವದಿಂದ ಪಾಠ ಕಲಿಯುವ ಪ್ರಸಂಗ.
ಕಟಕ
ಪ್ರತಿ ಕಾರ್ಯ ಇಂದು ಸಫಲತೆ ಕಾಣಲಿದೆ. ಆದರೆ ಹೆಚ್ಚಿನ ಶ್ರಮ ಅಗತ್ಯ. ಕೌಟುಂಬಿಕ ಸೌಹಾರ್ದ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ.
ಸಿಂಹ
ಈ ದಿನ ಏರಿಳಿತ ಕಾಣುವಿರಿ. ಕೌಟುಂಬಿಕ ಬಿಕ್ಕಟ್ಟು ಸಂಭವ. ಆದರೆ ಸಮಸ್ಯೆ ಪರಿಹಾರದಲ್ಲೂ ಯಶಸ್ಸು ಕಾಣುವಿರಿ. ವೃತ್ತಿಯಲ್ಲಿ ಉನ್ನತಿ.
ಕನ್ಯಾ
ಈ ದಿನ ನಿಧಾನ ಪ್ರಗತಿ. ತಕ್ಷಣದ ಪ್ರತಿಫಲ ನಿರೀಕ್ಷಿಸಬೇಡಿ. ಮನೆಯಲ್ಲಿ ಕಟುಮಾತು ಬಳಸಬೇಡಿ. ಸೌಹಾರ್ದ ವರ್ತನೆ ಒಳ್ಳೆಯದು.
ತುಲಾ
ಅಹಿತಕರ ಬೆಳವಣಿಗೆ ಉಂಟಾದೀತು. ಚಿಂತೆ ಬೇಡ. ಬೇಗದಲ್ಲೆ ಎಲ್ಲವೂ ಸುಸ್ಥಿತಿಗೆ ಮರಳುವುದು. ದೈಹಿಕ ಅಸ್ವಸ್ಥತೆ ಕಾಡೀತು. ಕಾಳಜಿ ವಹಿಸಿ.
ವೃಶ್ಚಿಕ
ಸುಲಭದಲ್ಲಿ ಯಶಸ್ಸು ಸಿಗಲಿದೆ. ಹೊಸ ವಹಿವಾಟು ಆರಂಭಕ್ಕೆ ಸೂಕ್ತ ಅವಕಾಶವಿದೆ. ವೃತ್ತಿ ಸವಾಲು ಸಮರ್ಥವಾಗಿ ಎದುರಿಸುವಿರಿ.
ಧನು
ವರ್ಚಸ್ಸು ಹೆಚ್ಚಳ. ಆರ್ಥಿಕ ಉನ್ನತಿ. ಸಣ್ಣಪುಟ್ಟ ಕಲಹದಲ್ಲಿ ಪಾಲ್ಗೊಳ್ಳದಿರಿ. ಕೆಟ್ಟ ಆಹಾರದಿಂದ ಹೊಟ್ಟೆ ಕೆಡುವ ಸಾಧ್ಯತೆಯಿದೆ. ಸಂಬಂಧ ಸುಧಾರಣೆ.
ಮಕರ
ಪ್ರತಿಕೂಲ ಪರಿಸ್ಥಿತಿ ನಿಮ್ಮ ಪರವಾಗಿ ಬದಲಿಸಿಕೊಳ್ಳಿ. ಅದಕ್ಕೆ ಸೂಕ್ತ ನೆರವೂ ಒದಗಲಿದೆ. ಮನೆಯ ವ್ಯವಹಾರಕ್ಕೂ ಗಮನ ಕೊಡಿರಿ.
ಕುಂಭ
ಇತರರು ನಿಮ್ಮ ಕೆಲಸ ಮೆಚ್ಚಿಕೊಳ್ಳದಿದ್ದರೆ ಧೃತಿಗೆಡಬೇಡಿ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಉಜ್ವಲ. ಕೌಟುಂಬಿಕ ಸಹಕಾರ.
ಮೀನ
ಉದ್ವಿಗ್ನ ಸ್ಥಿತಿ ಎದುರಿಸಿದರೂ ನಿಮ್ಮ ಮನಸ್ಸು ಶಾಂತವಾಗಿರಲಿ. ಮನೆಯಲ್ಲಿ ಹಿರಿಯರ ಹಿತಾಸಕ್ತಿಗೆ ಗಮನ ಕೊಡಿ. ಆರ್ಥಿಕ ಲಾಭ.



