ವಿದೇಶಿ ವಸ್ತುಗಳ ಗುಲಾಮಗಿರಿ ಬಿಡಿ, ಸ್ಥಳೀಯ ವಸ್ತುಗಳಿಗೆ ಪ್ರಾಶಸ್ತ್ಯ ಕೊಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

“ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ ಇನ್ನಾದರೂ ವಿದೇಶಿ ವಸ್ತುಗಳ ಗುಲಾಮಗಿರಿ ಕಡಿಮೆ ಮಾಡಿ ಆತ್ಮ ನಿರ್ಭರತೆಗೆ ಪ್ರಾಶಸ್ತ್ಯ ಕೊಡಿ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜೈನ್ ಇಂಟರ್‌ನ್ಯಾಶನಲ್ ಟ್ರೇಡ್ ಆರ್ಗನೈಸೇಶನ್‌ನ ʼಜೀಟೋ ಕನೆಕ್ಟ್-2022″‌ ಅನ್ನು ವರ್ಚುವಲ್‌ ಮೂಲಕ ಉದ್ಘಾಟಿಸಿದ ಮೋದಿ “ಇಂದು ದೇಶದಲ್ಲಿ ಪ್ರತಿಭೆ, ವ್ಯಾಪಾರ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ದೇಶದಾದ್ಯಂತ ಪ್ರತಿದಿನ ಹತ್ತಾರು ಸ್ಟಾರ್ಟಪ್‌ ಗಳು ನೊಂದಾವಣೆಯಾಗುತ್ತಿದೆ. ವಾರಕ್ಕೊಂದು ಯುನಿಕಾರ್ನ್‌ ಹುಟ್ಟಿಕೊಳ್ಳುತ್ತಿದೆ” ಎಂದು ಹೇಳಿದ್ದಾರೆ.

ಸ್ವಾವಲಂಬಿ ಭಾರತದ ನಿರ್ಮಾಣ ನಮ್ಮ ಸಂಕಲ್ಪ ಎಂದು ಹೇಳಿದ ಮೋದಿ “ಜೆಮ್‌ ಪೋರ್ಟಲ್‌ ಮೂಲಕ ಈಗ ದೂರದ ಹಳ್ಳಿಗಳ ಜನರು, ಸಣ್ಣ ಅಂಗಡಿಕಾರರು ಮತ್ತು ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು. ಈಗಾಗಲೇ 40 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಜಿಇಎಂ ಪೋರ್ಟಲ್‌ಗೆ ಸೇರಿದ್ದಾರೆ. ಸರ್ಕಾರವು ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಎಲ್ಲರೂ ವಿದೇಶಿ ಸರಕುಗಳ ಅವಲಂಬನೆಯನ್ನು ಬಿಟ್ಟು ಸ್ಥಳೀಯ ಉತ್ಪನ್ನಗಳಿಗೆ ಪ್ರಾಶಸ್ತ್ಯ ಕೊಡಬೇಕು ಆ ಮೂಲಕ ಸ್ವಾವಲಂಬಿ ಸಮೃದ್ಧ ಭಾರತದ ನಿರ್ಮಾಣಕ್ಕೆ ಕೈ ಜೋಡಿಸಬೇಕು” ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!