November 24, 2026
Tuesday, November 24, 2026
spot_img

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ; 6 ವರ್ಷದ ಗಂಡು ಚಿರತೆ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಅಂಕೋಲಾ:

ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಎಕ್ಕೆಗುಳಿ ಬಳಿ ಚಿರತೆಯೊಂದು ಅಪರಿಚಿತ ವಾಹನ ಬಡಿದು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸುಮಾರು 6 ವರ್ಷದ ಗಂಡು ಚಿರತೆ ಇದಾಗಿದ್ದು ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದೆ ಎಂದು ಅಂದಾಜಿಸಲಾಗಿದೆ. ಚಿರತೆಯ ಮುಖ ಕಣ್ಣು, ಕಿವಿಯಿಂದ ರಕ್ತ ಜಿನುಗುತ್ತಿರುವುದು ಪತ್ತೆಯಾಗಿದೆ. ಮಾಸ್ತಿಕಟ್ಟಾ ವಲಯದ ಎಕ್ಕೆಗುಳಿ (ಬಡಿಗೋಣ) ಈ ಘಟನೆ ನಡೆದಿದ್ದು ಮೃತ ಚಿರತೆ ಹೆದ್ದಾರಿಯ ಪಕ್ಕದ ಪೊದೆಯಲ್ಲಿ ಸತ್ತು ಬಿದ್ದಿರುವುದನ್ನು ಸಂಜೆ 6.30 ರ ಸುಮಾರಿಗೆ ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಡಿಸಿಎಫ್ ಅಂತೋನಿ, ಎಸಿಎಫ್ ಪ್ರಫುಲ್ಲ ಶೆಟ್ಟಿ ಮಾರ್ಗದರ್ಶನದಲ್ಲಿ ಮಾಸ್ತಿಕಟ್ಟಾ ಅರಣ್ಯಾಧಿಕಾರಿ ಪ್ರವೀಣ ನಾಯಕ, ಉಪ ಅರಣ್ಯಾಧಿಕಾರಿ ಎಂ.ಬಿ. ಗೌಡ. ಬೀಟ್ ಫಾರೆಸ್ಟರ್ ಈರಣ್ಣ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Must Read

Skip to toolbar