ಈಜು ಸ್ಪರ್ಧೆಯಲ್ಲಿ ನಟ ಮಾಧವನ್ ಪುತ್ರ ಮತ್ತೊಂದು ದಾಖಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿನಿಮಾ ನಟ ಮಾಧವನ್ ಪುತ್ರ ವೇದಾಂತ್ ಮತ್ತೊಮ್ಮೆ ಚಿನ್ನದ ಪದಕ ಗೆದ್ದು ಸುದ್ದಿಯಲ್ಲಿದ್ದಾರೆ. ರಾಷ್ಟ್ರಮಟ್ಟದ ಈಜು ಸ್ಪರ್ಧೆ 48ನೇ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ 1500ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಈ ವಿಡಿಯೋವನ್ನು ನಟ ಮಾಧವನ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಎಂದಿಗೂ ಅಸಾಧ್ಯವೆನ್ನಬೇಡ. “ನೀನು 1500 ಮೀಟರ್‌ಗಳ ರಾಷ್ಟ್ರೀಯ ಜೂನಿಯರ್ ದಾಖಲೆಯನ್ನು ಮುರಿದಿದ್ದೀಯ” ಎಂದು ಶೀರ್ಷಿಕೆ ನೀಡಿ ವೇದಾಂತ್ ಈಜುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದ್ವೈತ್ 16 ನಿಮಿಷಗಳಲ್ಲಿ 780 ಮೀಟರ್ ಈಜಿ ದಾಖಲೆಯನ್ನು ಮುರಿದಿದ್ದಾರೆ.

ಏಪ್ರಿಲ್‌ನಲ್ಲಿ, ಕೋಪನ್‌ ಹೇಗನ್‌ಲಲಿ ನಡೆದ ಡ್ಯಾನಿಶ್ ಓಪನ್‌ ಪುರುಷರ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ವೇದಾಂತ್ ಚಿನ್ನದ ಪದಕವನ್ನು ಗೆದ್ದಿದ್ದರು. ವೇದಾಂತ್ ಪದಕವನ್ನು ಗೆದ್ದಿರುವ ಕ್ಲಿಪ್ ಅನ್ನು ಹಂಚಿಕೊಂಡ ಮಾಧವನ್, ಗೆಲುವಿನ ಓಟ ಈಗಲೂ ಮುಂದುವರೆದಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!