ವಿಶ್ವದ ನಂ.1 ಚೆಸ್‌ ಆಟಗಾರರನ್ನೇ ಸೋಲಿಸಿದ ಪ್ರಜ್ಞಾನಂದ: ಈ ಗ್ರ್ಯಾಂಡ್‌ ಮಾಸ್ಟರ್‌ ಸಾಧನೆ ಎಷ್ಟಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏರ್‌ ಥಿಂಗ್ಸ್‌ ಮಾಸ್ಟರ್ಸ್‌ ಆನ್‌ ಲೈನ್‌ ರ್ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಆರ್.‌ ಪ್ರಜ್ಞಾನಂದ ವೀಶ್ವಚಾಂಪಿಯನ್‌ ಮ್ಯಾಗಸ್‌ ಕಾರ್ಲ್‌ ಸನ್‌ ರನ್ನೇ ಸೋಲಿಸಿ ಅಮೋಘ ಸಾಧನೆ ಮಾಡಿದ್ದಾರೆ.

ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಈ ಗ್ರ್ಯಾಂಡ್‌ ಮಾಸ್ಟರ್‌ ಬಗ್ಗೆ ಇಲ್ಲಿದೆ ಮಾಹಿತಿ…

  • ಆ.10 2005ರಲ್ಲಿ ಚೆನೈನಲ್ಲಿ ಜನಿಸಿದರು ಪ್ರಜ್ಞಾನಂದ.
  • ಇವರ ತಂಗಿ ಕೂಡ ಚೆನ್‌ ಆಟಗಾರ್ತಿಯಾಗಿದ್ದು, 2021ರಲ್ಲಿ ಇಂಟರ್ನ್ಯಾಷನಲ್‌ ಮಾಸ್ಟರ್‌ ಬಿರುದು ಪಡೆದಿದ್ದೆ.
  • ಈಗ ಪ್ರಜ್ಞಾನಂದ ಭಾರತದ ಅತಿ ಕಿರಿಯ ಗ್ರ್ಯಾಂಡ್‌ ಮಾಸ್ಟರ್.‌
  • 2016ರಲ್ಲಿ ಅಂದರೆ ತಮ್ಮ 10ನೇ ವಯಸ್ಸಿನಲ್ಲಿ ಪ್ರಜ್ಞಾನಂದ ಅತಿ ಕಿರಿಯ ಇಂಟರ್ನ್ಯಾಷನಲ್‌ ಮಾಸ್ಟರ್‌ ಆಗಿದ್ದರು.
  • 2013ರಲ್ಲಿ ನಡೆದ ಅಂಡರ್-8 ಪಂದ್ಯದಲ್ಲಿ ವಿಸ್ವದ ಯುವ ಚೆಸ್‌ ಚಾಂಪಿಯನ್‌ ಶಿಪ್‌ ಗೆದ್ದಿದ್ದರು.
  • ಗ್ರ್ಯಾಂಡ್‌ ಮಾಸ್ಟರ್‌ ಪಟ್ಟಕ್ಕೇರಿದ ಐದನೇ ಕಿರಿಯ ಆಟಗಾರ ಪ್ರಜ್ಞಾನಂದ.
  • 2018ರಲ್ಲಿ ಚೆಸ್‌ ಇತಿಹಾಸಲ್ಲಿ ಎರಡನೇ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌ ಆಗಿದ್ದು ಪ್ರಜ್ಞಾನಂದ.
  • 2021ರ ಚೆಸ್ ವಿಶ್ವಕಪ್​ನಲ್ಲಿ 90ನೇ ಶ್ರೇಯಾಂಕವಾಗಿ ಪ್ರವೇಶಿಸಿ, ಗ್ರ್ಯಾಂಡ್‌ ಮಾಸ್ಟರ್ ಗೇಬ್ರಿಯಲ್ ಸರ್ಗಿಸ್ಸಿಯನ್, ಗ್ರ್ಯಾಂಡ್‌ ಮಾಸ್ಟರ್ ಮೈಕಾಲ್ ಕ್ರಾಸೆಂಕೋವ್‌ ರನ್ನು ಸೋಲಿಸಿದ್ದರು.

ಪ್ರಜ್ಞಾನಂದ ಅವರ ಸಾಧನೆಯನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಕೊಂಡಾಡಿದ್ದಾರೆ. ವು ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದೀರ ಎಂದು ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!