ಒಂದು ಹನಿ ನೀರನ್ನು ಕುಡಿಯದೇ ಜೀವಹಿಂಡುವ ಖಾಯಿಲೆಗೆ ರೇಬೀಸ್ ಎನ್ನಬಹುದು. ನಾಯಿ ಕಚ್ಚಿದ ನಂತರ ಮನೆಮದ್ದುಮಗಳನ್ನು ಮಾಡಿಕೊಂಡು ಆರಾಮಾದೆವು ಎಂದುಕೊಳ್ಳುತ್ತೀವಿ. ಆದರೆ ಆರು ತಿಂಗಳ ನಂತರವೂ ರೇಬೀಸ್ ಕಾಡಬಹುದು. ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಭಾಗ್ಪತ್ನಲ್ಲಿ 14 ವರ್ಷದ ಬಾಲಕ ರೇಬೀಸ್ನಿಂದಾಗಿ ಮೃತಪಟ್ಟಿದ್ದಾನೆ. ರಸ್ತೆಯಲ್ಲಿ ಬೀದಿ ನಾಯಿಯಿಂದು ಕಚ್ಚಿದ ನಂತರ ಬಾಲಕ ವೈದ್ಯರ ಬಳಿ ಪರೀಕ್ಷಿಸಿಕೊಂಡಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ವಾರದ ನಂತರ ಬಾಲಕನಲ್ಲಿ ನೀರನ್ನು ಕಂಡರೆ ಭಯ ಆರಂಭವಾಗಿದೆ. ನೀರು ಕುಡಿಯದೇ ಬಾಲಕನ ಆರೋಗ್ಯ ಕ್ಷೀಣಿಸಿದಿದೆ. ತದನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ತನಗೆ ನೀರು ಬೇಕು ಎಂದು ಅಂಗಲಾಚಿದ್ದಾನೆ. ತಾಯಿಯೂ ಮಗನಿಗೆ ನೀರು ಕುಡಿಸುವ ಯತ್ನ ಮಾಡಿದ್ದಾರೆ. ಆದರೆ ಆತನ ಗಂಟಲಿನಿಂದ ಒಂದು ಹನಿ ನೀರು ಕೂಡ ಒಳಕ್ಕೆ ಇಳಿದಿಲ್ಲ.
ಕೆಲವೇ ಸಮಯದಲ್ಲಿ ಕುಟುಂಬದವರ ಎದುರೇ ಆತ ಮೃತಪಟ್ಟಿದ್ದಾನೆ. ನಾಯಿ ಕಚ್ಚಿದ ದಿನವೇ ಆತನನ್ನು ಆಸ್ಪತ್ರೆಗೆ ದಾಖಲಿಸಬೇಕಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಎಂದಿಗೂ ನಾಯಿ ಕಚ್ಚಿದ್ದನ್ನು ಇಗ್ನೋರ್ ಮಾಡಬೇಡಿ.
ರೇಬೀಸ್ ಬಗ್ಗೆ ಈ ಮಾಹಿತಿ ನೆನಪಿರಲಿ
ನಾಯಿ ಕಚ್ಚಿದ ಅಥವಾ ಗಾಯ ಮಾಡಿದ ತಕ್ಷಣ ಆ ಜಾಗವನ್ನು ಸೋಪು ಹಾಕಿ ತೊಳೆಯಿರಿ. ಹರಿಯುವ ನಲ್ಲಿ ನೀರಿನ ಬಳಿ ಗಾಯವನ್ನು ಕಾಲುಗಂಟೆ ಬಿಡಿ. ಚಿಕ್ಕ ಅಥವಾ ದೊಡ್ಡ ಗಾಯ ಆಗಿರಲಿ ತಕ್ಷಣವೇ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ. ಅವರು ನೀಡಿದ ಮಾತ್ರೆ ಔಷಧ ಹಾಗೂ ಇಂಜೆಕ್ಷನ್ಗಳನ್ನು ತಪ್ಪದೇ ಸೇವಿಸಿ. ಮನೆ ಮದ್ದುಗಳ ಮೇಲೆ ಡಿಪೆಂಡ್ ಆಗಬೇಡಿ.
ಒಂದು ಬಾರಿ ಲಕ್ಷಣಗಳು ಕಾಣಿಸಿದರೆ ಪ್ರಾಣ ಉಳಿಸುವುದು ಅಸಾಧ್ಯವಾಗಿದೆ. ನಾಯಿ ಕಚ್ಚಿದರೆ ಅಥವಾ ಕೆರೆದರೆ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡುವಂತೆ ಮಕ್ಕಳಿಗೆ ಹೇಳಿಕೊಡಿ. ಒಂದೇ ಒಂದು ಸಣ್ಣ ತಪ್ಪು ಜೀವವನ್ನು ಕಳೆದು ನಿಮ್ಮ ಜೀವನವನ್ನು ನರಕ ಮಾಡಿಬಿಡಬಹುದು.



