ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್‌ಗೆ ಇಂದು ಜನ್ಮದಿನದ ಸಂಭ್ರಮ.
ಸದ್ಯ ಸಿನಿಮಾ ರಂಗದಿಂದ ದೂರ ಇದ್ದು, ಮನೆಯಲ್ಲೇ ಖುಷಿಯಾಗಿರೋ ರಾಧಿಕಾ ಪಂಡಿತ್‌ಗೆ ಬರ್ಥ್‌ಡೇ ದಿನ ಫ್ಯಾನ್ಸ್ ಬೇಡಿಕೆಯೊಂದನ್ನು ಎದುರಿಟ್ಟಿದ್ದಾರೆ.
ಅದೇನೆಂದರೆ ರಾಧಿಕಾ ಮತ್ತೆ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು. ಸದ್ಯ ಐರಾ ಹಾಗೂ ಯಥರ್ವ್ ಜೊತೆ ಬ್ಯುಸಿ ಆಗಿರೋ ನಟಿ ಕಂಬ್ಯಾಕ್ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆಯಾಗಿದೆ.
ಅಭಿಮಾನಿಗಳ ಮಾತಿಗೆ ಮನ್ನಣೆ ಕೊಟ್ಟು ರಾಧಿಕಾ ಯಾವಾಗ ಕಂಬ್ಯಾಕ್ ಮಾಡಲಿದ್ದಾರೆ ಕಾದು ನೋಡಬೇಕಿದೆ.