ಕಲಿಯುಗದ ಬಕಾಸುರ: 15ಜನ ಸೇವಿಸುವ ಆಹಾರ ಒಬ್ಬನೇ ಗುಳುಂ ಸ್ವಾಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

15ಜನ ತಿನನು ಆಹಾರವನ್ನು ಈತನೊಬ್ಬನೇ ಸೇವಿಸುತ್ತಾನೆ. ಹೀಗೆ ತಿಂದು ತಿಂದು ಬರೋಬ್ಬರಿ 200 ಕೆ,ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಹೋದಲೆಲ್ಲಾ ಮಾಡಿರುವ ಅಡುಗೆ ಖಾಲಿ. ಈತನ ನಡವಳಿಕೆ ನೋಡಿ ನೆಂಟರಿಷ್ಟಿರು ಯಾವುದೇ ಕಾರ್ಯಕ್ರಮಗಳಿಗೆ ಈತನ ಕುಟುಂಬಸ್ಥರನ್ನು ಆಹ್ವಾನ ಮಾಡಲ್ಲವಂತೆ.

ಬಿಹಾರದ ಕತಿಹಾರ್ ಜಿಲ್ಲೆಯ ಜಯನಗರದ ರಫೀಕ್ ಅದ್ನಾನ್‌ಗಿರುವ ವಿಚಿತ್ರ ಖಾಯಿಲೆಯಿಂದ ಈ ರೀತಿ ಅಧಿಕ ಆಹಾರ ಸೇವನೆ ಮಾಡುತ್ತಿದ್ದಾರಂತೆ. ಬುಲಿಮಿಯಾ ನರ್ವೆಸಾ ಎಂಬ ಖಾಯಿಲೆಯಿಂದ ಬಳಲುತ್ತಿರುವ ಈತನಿಗೆ ಅತಿಯಾದ ಹಸಿವು ಕಾಣಿಸಿಕೊಳ್ಳುತ್ತದೆ. ಒಂದು ಬಾರಿ ಊಟಕ್ಕೆ ಕುಳಿತರೆ, ನಾಲ್ಕು ಕಿಲೋ ಹಿಟ್ಟಿನಿಂದ ಮಾಡಿದ ರೊಟ್ಟಿ, 3 ಕೆಜಿ ಅಕ್ಕಿಯ ಅನ್ನ, ಎರಡು ಕಿಲೋ ಕೋಳಿ, ಒಂದೂವರೆ ಕೆಜಿ ಮೀನು, 3 ಲೀಟರ್ ಹಾಲು ಬೇಕಂತೆ.

ರಫೀಕ್‌ಗೆ ಇಬ್ಬರು ಪತ್ನಿಯರಿದ್ದು, ಮಕ್ಕಳಿಲ್ಲ. ಅವರ ಹಸಿವಿಗೆ ಹೆದರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಲ್ಲಾ ಖಾಲಿ ಮಾಡುತ್ತಾನೆ ಎಂಬ ಭಯದಿಂದ ಫಂಕ್ಷನ್‌ಗಳಿಗೂ ಕರೆಯುತ್ತಿಲ್ಲವಂತೆ. ಧಾನ್ಯ ವ್ಯಾಪಾರ ಮಾಡುವ ರಫೀಕ್‌ಗೆ ಸದ್ಯ ಯಾವುದೇ ಆರ್ಥಿಕ ತೊಂದರೆಯಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!