‘ರಾಗಿ’ ಸಂಭ್ರಮ: ಖರ್ಗೆ, ಸಿಂಗ್, ಧಂಕರ್ ಜೊತೆ ಕುಳಿತು ಭೋಜನ ಸವಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಗಿ ವರ್ಷ 2023 ರ ಅಂಗವಾಗಿ ಸಂಸತ್ ಸದಸ್ಯರಿಗೆ ಕೃಷಿ ಸಚಿವ ನರೇಂದ್ರ ತೋಮರ್ ಅವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹಿತ ಸಂಸದರು ಭೋಜನ ಸವಿದಿದ್ದಾರೆ.

ಪ್ರಧಾನಿ ಮೋದಿ ಅವರ ಜೊತೆಯಲ್ಲಿ ಕೃಷಿ ಸಚಿವ ನರೇಂದ್ರ ತೋಮರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಕರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕುಳಿತು ಊಟ ಮಾಡಿದ್ದು ವಿಶೇಷವಾಗಿತ್ತು.

ಇಂದು ತಯಾರಿಸಲಾದ ಖಾದ್ಯಗಳಲ್ಲಿ ರಾಗಿಯಿಂದ ಮಾಡಿದ ಖಿಚಡಿ, ರಾಗಿ ದೋಸೆ, ರಾಗಿ ರೊಟ್ಟಿ, ಜೋಳದ ರೊಟ್ಟಿ, ಹಲ್ದಿ ಸಬ್ಜಿ, ಬಾಜ್ರಾ, ಚುರ್ಮಾ ಸೇರಿದ್ದವು.

ಪ್ರಧಾನಿ ಮೋದಿ ಅವರು ಟ್ವಿಟ್ ಮಾಡುವ ಮೂಲಕ ಖುಷಿಯನ್ನು ಹಂಚಿಕೊಂಡಿದ್ದು, ನಾವು 2023 ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಗುರುತಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದ ರಾಗಿ ಭಕ್ಷ್ಯಗಳ ರುಚಿಕರ ಊಟದಲ್ಲಿ ಭಾಗವಹಿಸಿದ್ದೇವೆ. ಎಲ್ಲರು ಜೊತೆಯಾಗಿ ನೋಡಲು ಸಂತೋಷವಾಗಿದೆ ಎಂದರು.

ಇಂದು ಮುಂಜಾನೆ, ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ರಾಗಿ ವರ್ಷ 2023 ರ ಆಚರಣೆಗೆ ಒತ್ತು ನೀಡಿದರು ಮತ್ತು ರಾಗಿ ಮೂಲಕ ನಡೆಯುತ್ತಿರುವ ಪೌಷ್ಟಿಕಾಂಶ ಅಭಿಯಾನವನ್ನು ಉತ್ತೇಜಿಸುವ ಮಾರ್ಗಗಳನ್ನು ಸೂಚಿಸಿದರು.
ಪ್ರಧಾನಿ ನಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು 2023 ನೇ ವರ್ಷವನ್ನು ಅಂತಾರಾಷ್ಟ್ರೀಯ ರಾಗಿ ವರ್ಷ (IYOM) ಎಂದು ಘೋಷಿಸಿದೆ.ಭಾರತ ಸರ್ಕಾರವು ಏಪ್ರಿಲ್ 2018 ರಲ್ಲಿ ರಾಗಿಯನ್ನು ಪೌಷ್ಠಿಕ-ಧಾನ್ಯವೆಂದು ಘೋಷಿಸಿತ್ತು ಮತ್ತು ಪೋಶನ್ ಮಿಷನ್ ಅಭಿಯಾನದಲ್ಲಿ ರಾಗಿಯನ್ನು ಸಹ ಸೇರಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!